← 1Corinthians (10/16) → |
1. | ಇದಲ್ಲದೆ ಸಹೋದರರೇ, ನೀವು ಈ ವಿಷಯಗಳನ್ನು ಅರಿಯದವರಾಗಿರ ಬಾರದೆಂದು ನನ್ನ ಅಪೇಕ್ಷೆಯಲ್ಲ; ಅದೇನಂದರೆ--ನಮ್ಮ ಪಿತೃಗಳೆಲ್ಲರೂ ಮೇಘದ ಕೆಳಗೆ ಇದ್ದು ಸಮುದ್ರವನ್ನು ದಾಟಿದರು; |
2. | ಅವರೆಲ್ಲರೂ ಮೋಶೆ ಗಾಗಿ ಮೇಘದಲ್ಲಿಯೂ ಸಮುದ್ರದಲ್ಲಿಯೂ ಬಾಪ್ತಿಸ್ಮ ಹೊಂದಿದರು; |
3. | ಅವರೆಲ್ಲರೂ ಆತ್ಮಿಕವಾದ ಒಂದೇ ಆಹಾರವನ್ನು ತಿಂದರು; |
4. | ಅವರೆಲ್ಲರೂ ಆತ್ಮಿಕವಾದ ಒಂದೇ ಪಾನವನ್ನು ಕುಡಿದರು; ಯಾಕಂದರೆ ಅವರನ್ನು ಹಿಂಬಾಲಿಸಿದ ಆ ಆತ್ಮಿಕ ಬಂಡೆಯೊಳಗಿಂದ ಅವರು ಕುಡಿದರು; ಆ ಬಂಡೆಯು ಕ್ರಿಸ್ತನೇ. |
5. | ಆದರೆ ಅವ ರೊಳಗೆ ಅನೇಕರ ವಿಷಯದಲ್ಲಿ ದೇವರು ಸಂತೋಷಿ ಸಲಿಲ್ಲ; ಯಾಕಂದರೆ ಅವರು ಅಡವಿಯೊಳಗೆ ಸಂಹರಿ ಸಲ್ಪಟ್ಟರು. |
6. | ಅವರು ಕೆಟ್ಟವಿಷಯಗಳನ್ನು ಆಶಿಸಿದಂತೆ ನಾವು ಆಶಿಸುವವರಾಗಬಾರದೆಂಬದಕ್ಕಾಗಿ ಈ ಸಂಗತಿ ಗಳು ನಮಗೆ ನಿದರ್ಶನಗಳಾಗಿವೆ. |
7. | ಇಲ್ಲವೆ--ಜನರು ತಿನ್ನುವದಕ್ಕೂ ಕುಡಿಯುವದಕ್ಕೂ ಕೂತುಕೊಂಡರು; ಆಟವಾಡುವದಕ್ಕೆ ಎದ್ದರು ಎಂದು ಬರೆದಿರುವ ಪ್ರಕಾರ ನೀವೂ ಅವರಲ್ಲಿ ಕೆಲವರಂತೆ ವಿಗ್ರಹಾರಾಧಕರಾಗ ಬೇಡಿರಿ. |
8. | ಅವರಲ್ಲಿ ಕೆಲವರು ಜಾರತ್ವಮಾಡಿ ಒಂದೇ ದಿನದಲ್ಲಿ ಇಪ್ಪತ್ತುಮೂರು ಸಾವಿರ ಮಂದಿ ಸತ್ತರು; ನಾವು ಜಾರತ್ವ ಮಾಡದೆ ಇರೋಣ. |
9. | ಇದಲ್ಲದೆ ನಾವು ಕ್ರಿಸ್ತನನ್ನು ಪರಿಶೋಧಿಸದೆ ಇರೋಣ; ಯಾಕಂದರೆ ಅವರಲ್ಲಿಯೂ ಕೆಲವರು ಪರಿಶೋಧಿಸಿ ಸರ್ಪಗಳಿಂದ ಸಂಹಾರವಾದರು. |
10. | ಇದಲ್ಲದೆ ಅವರಲ್ಲಿ ಕೆಲವರು ಗುಣುಗುಟ್ಟಿ ಸಂಹಾರಕನ ಕೈಯಿಂದ ನಾಶ ವಾದರು; ಆದದರಿಂದ ನೀವು ಗುಣುಗುಟ್ಟಬೇಡಿರಿ. |
11. | ಅವರಿಗೆ ಸಂಭವಿಸಿದ ಈ ಎಲ್ಲಾ ಸಂಗತಿಗಳು ನಿದರ್ಶನಗಳಾಗಿವೆ; ಲೋಕದ ಅಂತ್ಯಕ್ಕೆ ಬಂದಿರುವ ವರಾದ ನಮಗೆ ಅವು ಬುದ್ಧಿವಾದಗಳಾಗಿ ಬರೆದವೆ. |
12. | ಆದಕಾರಣ ನಿಂತಿದ್ದೇನೆಂದು ನೆನಸುವವನು ಬೀಳ ದಂತೆ ಎಚ್ಚರಿಕೆಯಾಗಿರಲಿ. |
13. | ಮನುಷ್ಯನಿಗೆ ಸಾಮಾನ್ಯ ವಾಗಿ ಬರುವ ಶೋಧನೆಯೇ ಹೊರತು ಬೇರೆ ಯಾವದೂ ನಿಮಗೆ ಸಂಭವಿಸಲಿಲ್ಲ; ಆದರೆ ದೇವರು ನಂಬಿಗಸ್ತನು; ನೀವು ಸಹಿಸುವದಕ್ಕಿಂತ ಹೆಚ್ಚಿನ ಶೋಧನೆಯನ್ನು ಆತನು ನಿಮಗೆ ಬರಮಾಡುವದಿಲ್ಲ; ಆದರೆ ನೀವು ಅದನ್ನು ಸಹಿಸುವದಕ್ಕೆ ಶಕ್ತರಾಗುವಂತೆ ಶೋಧ |
14. | ಆದದರಿಂದ ನನ್ನ ಅತಿ ಪ್ರಿಯವಾದವರೇ, ವಿಗ್ರಹಾರಾಧನೆಯಿಂದ ಓಡಿಹೋಗಿರಿ. |
15. | ನೀವು ವಿವೇಕಿಗಳೆಂದು ಇದನ್ನು ಹೇಳುತ್ತೇನೆ; ನಾನು ಹೇಳುವ ದನ್ನು ನೀವೇ ಯೋಚಿಸಿರಿ. |
16. | ನಾವು ಸ್ತೋತ್ರಸಲ್ಲಿಸುವ ಸ್ತೋತ್ರದ ಪಾತ್ರೆಯು ಕ್ರಿಸ್ತನ ರಕ್ತದ ಅನ್ಯೋನ್ಯತೆ ಯಲ್ಲವೋ? ನಾವು ಮುರಿಯುವ ರೊಟ್ಟಿಯು ಕ್ರಿಸ್ತನ ದೇಹದ ಅನ್ಯೋನ್ಯತೆಯಲ್ಲವೋ? |
17. | ಅನೇಕರಾದ ನಾವು ಒಂದೇರೊಟ್ಟಿಯೂ ಒಂದೇದೇಹವೂ ಆಗಿದ್ದೇವೆ; ನಾವೆಲ್ಲರೂ ಆ ಒಂದೇ ರೊಟ್ಟಿಯಲ್ಲಿ ಪಾಲುಗಾರರಾಗಿದ್ದೇವೆ. |
18. | ಶರೀರದ ಪ್ರಕಾರ ಇಸ್ರಾಯೇಲ್ಯರನ್ನು ನೋಡಿರಿ; ಯಜ್ಞ ಮಾಡಿದವು ಗಳನ್ನು ತಿನ್ನುವವರು ಯಜ್ಞವೇದಿಯೊಂದಿಗೆ ಪಾಲು ಗಾರರಾಗಿದ್ದಾರಲ್ಲವೇ? |
19. | ಹಾಗಾದರೆ ನಾನು ಏನು ಹೇಳಲಿ? ವಿಗ್ರಹವು ಏನಾದರೂ ವಿಶೇಷವೋ? ಇಲ್ಲವೆ ವಿಗ್ರಹಗಳಿಗೆ ಯಜ್ಞಾರ್ಪಣೆ ಮಾಡಿದ್ದು ಏನಾದರೂ ವಿಶೇಷವೋ? |
20. | ಆದರೆ ಅನ್ಯಜನರು ಯಜ್ಞಾರ್ಪಣೆ ಮಾಡುವದು ದೆವ್ವಗಳಿಗೆ, ದೇವರಿಗಲ್ಲ; ನೀವು ದೆವ್ವಗಳೊಂದಿಗೆ ಅನ್ಯೋನ್ಯವಾಗಿರಬೇಕೆಂದು ನಾನು ಇಷ್ಟಪಡುವದಿಲ್ಲ. |
21. | ನೀವು ಕರ್ತನಪಾತ್ರೆ ಯಲ್ಲಿಯೂ ದೆವ್ವಗಳ ಪಾತ್ರೆಯಲ್ಲಿಯೂ ಕುಡಿಯ ಲಾರಿರಿ; ನೀವು ಕರ್ತನ ಮೇಜಿನಲ್ಲಿಯೂ ದೆವ್ವಗಳ ಮೇಜಿನಲ್ಲಿಯೂ ಪಾಲುಗಾರರಾಗಲಾರಿರಿ. |
22. | ಕರ್ತ ನನ್ನು ರೇಗಿಸಬೇಕೆಂದಿದ್ದೇವೋ? ಆತನಿಗಿಂತಲೂ ನಾವು ಬಲಿಷ್ಠರೇನು? |
23. | ನನಗೆ ಎಲ್ಲಾ ವಿಷಯಗಳು ನ್ಯಾಯಸಮ್ಮತ ವಾಗಿವೆ; ಆದರೆ ಎಲ್ಲವೂ ವಿಹಿತವಾಗಿರುವದಿಲ್ಲ; ಎಲ್ಲಾ ವಿಷಯಗಳು ನನಗೆ ನ್ಯಾಯಸಮ್ಮತವಾಗಿವೆ; ಆದರೆ ಎಲ್ಲವೂ ಭಕ್ತಿವೃದ್ಧಿಯನ್ನುಂಟು ಮಾಡುವದಿಲ್ಲ. |
24. | ಪ್ರತಿಯೊಬ್ಬನು ತನ್ನ ಹಿತವನ್ನು ಚಿಂತಿಸದೆ ಪರ ಹಿತವನ್ನು ಚಿಂತಿಸಲಿ. |
25. | ಕಟುಕರ ಅಂಗಡಿಯಲ್ಲಿ ಮಾರುವದೇನಿದ್ದರೂ ಮನಸ್ಸಾಕ್ಷಿಯ ನಿಮಿತ್ತ ಯಾವ ಪ್ರಶ್ನೆಯನ್ನೂ ಕೇಳದೆ ತಿನ್ನಿರಿ. |
26. | ಭೂಮಿಯೂ ಅದರಲ್ಲಿರುವ ಸಮಸ್ತವೂ ಕರ್ತನದಾಗಿದೆಯಲ್ಲವೇ? |
27. | ನಂಬದವರಲ್ಲಿ ಯಾವನಾದರೂ ನಿಮ್ಮನ್ನು ಊಟಕ್ಕೆ ಕರೆಯುವಾಗ ಹೋಗುವದಕ್ಕೆ ನಿಮಗಿಷ್ಟವಿದ್ದರೆ ನಿಮ ಗೇನು ಬಡಿಸಿದರೂ ಅದನ್ನು ಮನಸ್ಸಾಕ್ಷಿಯ ನಿಮಿತ್ತ ಯಾವ ಪ್ರಶ್ನೆಯನ್ನೂ ಕೇಳದೆ ತಿನ್ನಿರಿ. |
28. | ಆದರೆ ಒಬ್ಬನು ನಿಮಗೆ--ಇದು ವಿಗ್ರಹಕ್ಕೆ ಬಲಿಕೊಟ್ಟದ್ದು ಎಂದು ಹೇಳಿದರೆ ಈ ವಿಷಯವನ್ನು ತಿಳಿಸಿದವನ ನಿಮಿತ್ತ ವಾಗಿಯೂ ಮನಸ್ಸಾಕ್ಷಿಯ ನಿಮಿತ್ತವಾಗಿಯೂ ತಿನ್ನ ಬೇಡಿರಿ; ಭೂಮಿಯೂ ಅದರಲ್ಲಿರುವ ಸಮಸ್ತವೂ ಕರ್ತನದಾಗಿದೆಯಲ್ಲವೇ? |
29. | ಆದರೆ ನಿನ್ನ ಸ್ವಂತ ಮನಸ್ಸಾಕ್ಷಿಗಾಗಿ ಅಲ್ಲ, ಬೇರೆಯವನ ಮನಸ್ಸಾಕ್ಷಿಗಾಗಿ ನಾನು ಹೇಳುತ್ತೇನೆ. ಮತ್ತೊಬ್ಬನ ಮನಸ್ಸಾಕ್ಷಿಯ ನಿಮಿತ್ತ ನನ್ನ ಸ್ವಾತಂತ್ರ್ಯಕ್ಕೆ ಯಾಕೆ ತೀರ್ಪಾಗಬೇಕು? |
30. | ನಾನು ಕೃಪೆಯಿಂದ ಪಾಲುಗಾರನಾಗಿ ಯಾವದಕ್ಕೋಸ್ಕರ ಕೃತಜ್ಞತೆಯನ್ನು ಸಲ್ಲಿಸುತ್ತೇನೋ ಅದರ ವಿಷಯದಲ್ಲಿ ನಾನು ಯಾಕೆ ದೂಷಿಸಲ್ಪಡಬೇಕು? |
31. | ಆದದರಿಂದ ನೀವು ತಿಂದರೂ ಕುಡಿದರೂ ಏನು ಮಾಡಿದರೂ ಎಲ್ಲವನ್ನು ದೇವರ ಮಹಿಮೆಗಾಗಿ ಮಾಡಿರಿ. |
32. | ಯೆಹೂದ್ಯರಿಗಾಗಲಿ ಗ್ರೀಕರಿಗಾಗಲಿ ದೇವರ ಸಭೆಗಾಗಲಿ ಅಭ್ಯಂತರವಾಗಬೇಡಿರಿ. |
33. | ಇದಲ್ಲದೆ ನಾನಂತೂ ನನ್ನ ಸ್ವಪ್ರಯೊಜನವನ್ನೇ ನೋಡದೆ ಅನೇಕರು ರಕ್ಷಿಸಲ್ಪಡುವಂತೆ ಅವರ ಪ್ರಯೋಜನಕ್ಕಾಗಿ ಎಲ್ಲಾ ವಿಷಯಗಳಲ್ಲಿ ಎಲ್ಲರನ್ನು ಮೆಚ್ಚಿಸುತ್ತೇನೆ. |
← 1Corinthians (10/16) → |