← 1Chronicles (7/29) → |
1. | ಇಸ್ಸಾಕಾರನ ಕುಮಾರರು--ತೋಲನು ಪೂವನುಯಾ ಶೂಬನು ಶಿಮ್ರೋನನುಈ ನಾಲ್ಕು ಮಂದಿ. |
2. | ತೋಲನ ಕುಮಾರರು ಉಜ್ಜೀಯು ರೆಫಾಯನು ಯೆರೀಯೇಲನು ಯಹ್ಮೈಯು ಇಬ್ಸಾಮನು ಸಮುವೇಲನು. ಇವರು ತಮ್ಮ ತಂದೆ ಯಾದ ತೋಲನ ಮನೆಗೆ ಯಜಮಾನರಾಗಿದ್ದರು. ಇವರು ತಮ್ಮ ವಂಶಗಳಲ್ಲಿ ಯುದ್ಧ ಪರಾಕ್ರಮ ಶಾಲಿಗಳಾಗಿದ್ದರು; ದಾವೀದನ ದಿವಸಗಳಲ್ಲಿ ಅವರ ಲೆಕ್ಕ ಇಪ್ಪತ್ತೆರಡು ಸಾವಿರದ ಆರುನೂರು ಮಂದಿ ಆಗಿತ್ತು. |
3. | ಉಜ್ಜೀಯನ ಕುಮಾರನು ಇಜ್ಯಹ್ಯಾಹನು. ಇಜ್ಯಹ್ಯಾಹನ ಕುಮಾರರು -- ವಿಾಕಾಯೇಲನು, ಓಬದ್ಯನು, ಯೋವೇಲನು, ಇಷ್ಷೀಯನು--ಈ ಐದು ಮಂದಿಯು; ಇವರೆಲ್ಲರು ಮುಖ್ಯಸ್ಥರಾಗಿದ್ದರು. |
4. | ಇವರ ಸಂಗಡ ಅವರ ವಂಶಗಳ ಪ್ರಕಾರವೂ ಅವರ ಪಿತೃಗಳ ಮನೆಯ ಪ್ರಕಾರವೂ ಯುದ್ಧಕ್ಕೋಸ್ಕರ ಮೂವತ್ತಾರು ಸಾವಿರ ಮಂದಿ ಸೈನಿಕರ ಗುಂಪುಗಳಿದ್ದವು; ಯಾಕಂದರೆ ಹೆಂಡತಿಯರು ಮಕ್ಕಳು ಅವರಿಗೆ ಬಹಳ ಮಂದಿ ಇದ್ದರು. |
5. | ಇಸ್ಸಾಕಾರನ ಕುಟುಂಬಗಳಾಗಿರುವ ಸಹೋ ದರರೊಳಗೆ ಅವರ ವಂಶಾವಳಿಗಳಲ್ಲಿ ಲೆಕ್ಕಿಸಲ್ಪಟ್ಟ ಯುದ್ಧ ಪರಾಕ್ರಮಶಾಲಿಗಳೆಲ್ಲರೂ ಎಂಭತ್ತೇಳು ಸಾವಿರ ಮಂದಿಯಾಗಿದ್ದರು. |
6. | ಬೆನ್ಯಾವಿಾನನ ಕುಮಾರರು--ಬೆಳನು, ಬೆಕರನು, ಯೆದೀಯಯೇಲನು--ಈ ಮೂರು ಮಂದಿ. |
7. | ಬೆಳನ ಕುಮಾರರು--ಎಚ್ಬೋನನು, ಉಜ್ಜೀಯು, ಉಜ್ಜೀಯೇ ಲನು, ಯೆರೀಮೋತನು, ಈರೀಯು--ಈ ಐದು ಮಂದಿ ತಮ್ಮ ಪಿತೃಗಳ ಮನೆಯಲ್ಲಿ ಯಜಮಾನ ರಾಗಿಯೂ ಯುದ್ಧದ ಪರಾಕ್ರಮಶಾಲಿಗಳಾಗಿಯೂ ಇದ್ದು ತಮ್ಮ ವಂಶಾವಳಿಗಳ ಪ್ರಕಾರ ಇಪ್ಪತ್ತೆರಡು ಸಾವಿರದ ಮೂವತ್ತು ನಾಲ್ಕುಮಂದಿ ಲೆಕ್ಕಿಸಲ್ಪಟ್ಟಿದ್ದರು. |
8. | ಬೆಕರನ ಕುಮಾರರು ಜೆವಿಾರನು, ಯೋವಾಷನು, ಎಲೀಯೆಜೆರನು, ಎಲ್ಯೋವೇನೈ, ಒಮ್ರಿಯು, ಯೇರಿ ಮೋತನು, ಅಬೀಯನು, ಅನಾತೋತನು, ಆಲೆ ಮೆತ್. ಇವರೆಲ್ಲರು ಬೆಕರನ ಕುಮಾರರು. |
9. | ಇವರ ಲೆಕ್ಕವು ತಮ್ಮ ಪಿತೃಗಳ ಮನೆಯ ಯಜಮಾನರ ವಂಶ ಗಳ ವಂಶಾವಳಿಯ ಪ್ರಕಾರವಾಗಿ ಯುದ್ಧ ಪರಾಕ್ರಮಶಾಲಿಗಳಾದವರು ಇಪ್ಪತ್ತುಸಾವಿರದ ಇನ್ನೂರು ಮಂದಿ. |
10. | ಯೆದೀಯಯೇಲನ ಕುಮಾರನು ಬಿಲ್ಹಾ ನನು. ಬಿಲ್ಹಾನನ ಕುಮಾರರು--ಯೆಯೂಷನು, ಬೆನ್ಯಾವಿಾನನು, ಏಹೂದನು, ಕೆನಾನನು, ಜೇತಾ ನನು, ತಾರ್ಷೀಷನು, ಅಹೀಷೆಹರನು. |
11. | ಇವರೆ ಲ್ಲರು ಯೆದೀಯಯೇಲನ ಕುಮಾರರು. ಅವರು ತಮ್ಮ ಪಿತೃಗಳಲ್ಲಿ ಯಜಮಾನರಾಗಿಯೂ ಯುದ್ಧದ ಪರಾಕ್ರಮಶಾಲಿಗಳಾಗಿಯೂ ಯುದ್ಧಕ್ಕೆ ಹೊರಡ ತಕ್ಕವರು ಹದಿನೇಳು ಸಾವಿರದ ಇನ್ನೂರು ಮಂದಿ ಯಾಗಿದ್ದರು. |
12. | ಅಹೇರನ ಕುಮಾರರಾದ ಈರನೂ ಹುಶೀ ಮನೂ ಎಂಬವರ ಮಕ್ಕಳು ಶುಪ್ಪೀಮನೂ ಹುಪ್ಪೀ ಮನೂ ಇದ್ದರು. |
13. | ನಫ್ತಾಲಿಯ ಕುಮಾರರು--ಯಹಚಿಯೇಲನು, ಗೂನೀಯು, ಯೇಚೆರನು, ಶಲ್ಲೂಮನು. ಇವರು ಬಿಲ್ಹಳ ಕುಮಾರರು. |
14. | ಮನಸ್ಸೆಯ ಕುಮಾರರು--ಅವನ ಹೆಂಡತಿಯು ಹೆತ್ತ ಅಷ್ರೀಯೇಲನು; ಅರಾಮ್ಯಳಾದ ಉಪಪತ್ನಿಯು ಗಿಲ್ಯಾದನಿಗೆ ತಂದೆಯಾದ ಮಾಕೀರನನ್ನು ಹೆತ್ತಳು. |
15. | ಆದರೆ ಈ ಮಾಕೀರನು ಹುಪ್ಪೀಮನು ಶುಪ್ಪೀಮನು ಎಂಬವರ ಸಹೋದರಿಯಾದ ಮಾಕಳನ್ನು ಹೆಂಡತಿ ಯಾಗಿ ತಕ್ಕೊಂಡನು. ಅವನ ಮೊಮ್ಮಗನ ಹೆಸರು ಚೆಲೋಫಾದನು; ಈ ಚೆಲೋಫಾದನಿಗೆ ಕುಮಾರ್ತೆ ಗಳು ಇದ್ದರು. |
16. | ಮಾಕೀರನ ಹೆಂಡತಿಯಾದ ಮಾಕಳು ಮಗನನ್ನು ಹೆತ್ತು ಪೆರೆಷೆಂದು ಹೆಸರಿಟ್ಟಳು. ಅವನ ಸಹೋದರನ ಹೆಸರು ಶೆರೆಷ್; ಇವನಿಗೆ ಊಲಾಮನು, ರೆಕೆಮನು ಎಂಬ ಹೆಸರುಳ್ಳ ಕುಮಾರ ರಿದ್ದರು. |
17. | ಊಲಾಮನ ಮಗ ಬೆದಾನನು. ಇವರೇ ಮನಸ್ಸೆಯ ಮಗನಾಗಿರುವ ಮಾಕೀರನ ಮಗನಾದ ಗಿಲ್ಯಾದನ ಕುಮಾರರು. |
18. | ಅವನ ಸಹೋದರಿಯಾದ ಹಮ್ಮೋಲೆಕೆತಳು ಈಷ್ಹೋದನನ್ನೂ ಅಬೀಯೆಜೆರ ನನ್ನೂ ಮಹ್ಲನನ್ನೂ ಹೆತ್ತಳು. |
19. | ಶೆವಿಾದನ ಕುಮಾ ರರು--ಅಹ್ಯಾನನು, ಶೆಕೆಮನು, ಲಿಕ್ಹೀಯು, ಅನೀಯಾಮನು. |
20. | ಎಫ್ರಾಯಾಮನ ಕುಮಾರರು--ಶೂತೆಲಹನು; ಇವನ ಮಗನು ಬೆರದನು. ಇವನ ಮಗನು ತಹತನು, ಇವನ ಮಗನು ಎಲ್ಲಾದನು; ಇವನ ಮಗನು ತಹತನು. |
21. | ಇವನ ಮಗನು ಜಾಬಾದನು; ಇವನ ಮಕ್ಕಳು --ಶೂತೆಲಹನು ಎಜೆರನೂ ಎಲ್ಲಾದನೂ. ಆ ದೇಶ ದಲ್ಲಿ ಹುಟ್ಟಿದ ಗತ್ನವರು ಇವರ ದನಗಳನ್ನು ಸುಲು ಕೊಳ್ಳಲು ಇಳಿದು ಬಂದಾಗ ಇವರನ್ನು ಕೊಂದು ಹಾಕಿದರು. |
22. | ಅವರ ತಂದೆಯಾದ ಎಫ್ರಾಯಾಮನು ಅನೇಕ ದಿವಸಗಳು ದುಃಖಪಟ್ಟದ್ದರಿಂದ ಅವನ ಸಹೋದರರು ಅವನನ್ನು ಆದರಿಸಲು ಬಂದರು. |
23. | ಅವನು ತನ್ನ ಹೆಂಡತಿಯನ್ನು ಕೂಡಿದಾಗ ಅವಳು ಗರ್ಭಧರಿಸಿ ಮಗನನ್ನು ಹೆತ್ತಳು. ಆಗ ತನ್ನ ಮನೆಯಲ್ಲಿ ಕೇಡು ಉಂಟಾದದ್ದರಿಂದ ಅವನಿಗೆ ಬೆರೀಯನೆಂಬ ಹೆಸರಿಟ್ಟನು. |
24. | ಇವನ ಕುಮಾರ್ತೆಯ ಹೆಸರು ಶೇರಳು; ಇವಳು ಮೇಲಣ ಮತ್ತು ಕೆಳಗಣ ಬೇತ್ಹೋರೋ ನನ್ನೂ, ಉಜ್ಜೇನ್ಶೇರವನ್ನೂ ಕಟ್ಟಿಸಿದಳು. |
25. | ಬೆರೀಯ ಮಗನು ರೆಫಹ, ಇವನ ಮಗನು ರೆಷೆಫನು; ಇವನಮಗನು ತೆಲಹನು. |
26. | ಇವನ ಮಗನು ತಹನ್, ಇವನ ಮಗನು ಲದ್ದಾನ್, ಇವನ ಮಗನು ಅವ್ಮೆಾಹೂದನು, ಇವನ ಮಗನು ಎಲೀಷಾಮನು, |
27. | ಇವನ ಮಗನು ನೋನನು, ಇವನ ಮಗನು ಯೆಹೋಷುವನು. |
28. | ಅವರ ಸ್ವಾಸ್ಥ್ಯಗಳೂ ನಿವಾಸಗಳೂ ಯಾವ ವೆಂದರೆ, ಬೇತೇಲೂ ಅದರ ಗ್ರಾಮಗಳೂ ಮೂಡಣ ದಿಕ್ಕಿನಲ್ಲಿ ನಾರಾನೂ ಪಡುವಣ ದಿಕ್ಕಿನಲ್ಲಿ ಗೆಜೆರೂ ಅದರ ಗ್ರಾಮಗಳೂ ಶೆಕೆಮೂ ಅದರ ಗ್ರಾಮಗಳೂ ಗಾಜವೂ ಅದರ ಗ್ರಾಮಗಳೂ |
29. | ಮನಸ್ಸೆಯ ಮಕ್ಕಳ ಮೇರೆಯಲ್ಲಿರುವ ಬೇತ್ಷಾನೂ ಅದರ ಗ್ರಾಮಗಳೂ ತಾನಾಕವೂ ಅದರ ಗ್ರಾಮಗಳೂ ಮೆಗಿದ್ದೋನೂ ಅದರ ಗ್ರಾಮಗಳೂ ದೋರೂ ಅದರ ಗ್ರಾಮಗಳೂ ಇವುಗಳಲ್ಲಿ ಇಸ್ರಾಯೇಲನ ಮಗನಾದ ಯೋಸೇಫನ ಕುಮಾರರು ವಾಸವಾಗಿದ್ದರು. |
30. | ಆಶೇರನ ಕುಮಾರರು--ಇಮ್ನನು, ಇಷ್ವನು, ಇಷ್ವೀ, ಬೆರೀಯನು ಅವರ ಸಹೋದರಿಯಾದ ಸೆರಹಳು. |
31. | ಬೆರೀಯನ ಕುಮಾರರು--ಹೆಬೆರನು ಮಲ್ಕೀಯೇಲನು; |
32. | ಇವನು ಬಿರ್ಜೈಯಿತನ ತಂದೆಯು. ಹೆಬೆರನು ಯಫ್ಲೇಟನನ್ನೂ ಶೋಮೇರ ನನ್ನೂ ಹೋತಾಮನನ್ನೂ ಅವರ ಸಹೋದರಿಯಾದ ಶೂವಳನ್ನೂ ಪಡೆದನು. |
33. | ಯಫ್ಲೇಟನ ಕುಮಾರರು--ಪಾಸಕನು, ಬಿಮ್ಹಾಲನು, ಅಶ್ವಾತನು. ಇವರೇ ಯಫ್ಲೇಟನ ಮಕ್ಕಳು. |
34. | ಶಮೆರನ ಕುಮಾರರು--ಅಹೀಯು, ರೊಹ್ಗನು, ಹುಬ್ಬನು, ಅರಾಮನು. |
35. | ಅವನ ಸಹೋದರನಾದ ಹೆಲೆಮನ ಕುಮಾರರು--ಚೋಫಹನು, ಇಮ್ನನು, ಶೇಲೆಷನು, ಆಮಾಲನು. |
36. | ಚೋಫಹನ ಕುಮಾರರು-- ಸೂಹನು, ಹರ್ನೇಫೆರನು, ಶೂಗಾಲನು, ಬೇರೀಯು, ಇಮ್ರನು, |
37. | ಬೆಚೆರನು, ಹೋದನು, ಶಮ್ಮನು, ಶಿಲ್ಷನು, ಇತ್ರಾನನು, ಬೇರನು. |
38. | ಯೆತೆರನ ಕುಮಾ ರರು--ಯೆಫುನ್ನೆಯು, ಪಿಸ್ಪನು, ಅರಾನು, |
39. | ಉಲ್ಲನ ಕುಮಾರರು--ಆರಹನು, ಹನ್ನೀಯೇಲನು ರಿಚ್ಯನು. |
40. | ಇವರೆಲ್ಲರು ಆಶೇರನ ಮಕ್ಕಳಾಗಿದ್ದು ತಮ್ಮ ತಂದೆಯ ಮನೆಯಲ್ಲಿ ಯಜಮಾನರಾಗಿಯೂ ಯುದ್ಧಪರಾಕ್ರಮ ಶಾಲಿಗಳಲ್ಲಿ ಮುಖ್ಯಸ್ಥರಾಗಿಯೂ ಪ್ರಭುಗಳಲ್ಲಿ ಶ್ರೇಷ್ಠ ರಾಗಿಯೂ ಇದ್ದರು. ಅವರ ವಂಶಾವಳಿಯಲ್ಲಿ ಬರೆಯ ಲ್ಪಟ್ಟ ಲೆಕ್ಕದ ಪ್ರಕಾರ ಯುದ್ದಕ್ಕೆ ಸಿದ್ಧವಾದವರು ಇಪ್ಪ ತ್ತಾರು ಸಾವಿರ ಮಂದಿಯಾಗಿದ್ದರು. |
← 1Chronicles (7/29) → |