← 1Chronicles (27/29) → |
1. | ಆದರೆ ಇಸ್ರಾಯೇಲ್ ಮಕ್ಕಳು ತಮ್ಮ ಲೆಕ್ಕದ ಪ್ರಕಾರವಾಗಿ ಹೀಗೆಯೇ ಇದ್ದರು; ಹೇಗಂದರೆ, ಮುಖ್ಯಸ್ಥರಾದ ಪಿತೃಗಳು ಸಹಸ್ರಗಳಿಗೂ ಶತಗಳಿಗೂ ಅಧಿಪತಿಗಳು. ವರುಷದ ಎಲ್ಲಾ ತಿಂಗಳು ಗಳಲ್ಲಿ ಪ್ರತಿ ತಿಂಗಳು ಒಳಗೆ ಹೋಗಿ ಬರುವ ವರ್ಗ ಗಳ ಕಾರ್ಯಗಳಲ್ಲಿ ಅರಸನನ್ನು ಸೇವಿಸಿದ ಅವರ ಪಾರುಪತ್ಯಗಾರರೂ ಪ್ರತಿ ವರ್ಗಕ್ಕೆ ಇಪ್ಪತ್ತನಾಲ್ಕು ಸಾವಿರ ಮಂದಿಯಾಗಿದ್ದರು. |
2. | ಮೊದಲನೇ ತಿಂಗಳಿಗೋಸ್ಕರ ಮೊದಲನೇ ವರ್ಗದ ಮೇಲೆ ಜಬ್ದೀಯೇಲನ ಮಗನಾದ ಯಾಷೊ ಬ್ಬಾಮನು; ಅವನ ವರ್ಗದಲ್ಲಿ ಇಪ್ಪತ್ತನಾಲ್ಕು ಸಾವಿರ ಜನರು. |
3. | ಮೊದಲನೇ ತಿಂಗಳಿನ ಸೈನ್ಯದ ಸಮಸ್ತ ಅಧಿಪತಿಗಳಲ್ಲಿದ್ದ ಮುಖ್ಯನಾದವನು ಪೇರಚನ ಮಕ್ಕ ಳಲ್ಲಿ ಒಬ್ಬನಾಗಿದ್ದನು. |
4. | ಎರಡನೇ ತಿಂಗಳಿನ ವರ್ಗದ ಮೇಲೆ ಅಹೋಹಿಯನಾದ ದೋದೈಯು; ಅವನ ವರ್ಗದಲ್ಲಿ ಮಿಕ್ಲೋತನು ನಾಯಕನಾಗಿದ್ದನು; ಅವನ ವರ್ಗದಲ್ಲಿ ಇಪ್ಪತ್ತನಾಲ್ಕು ಸಾವಿರ ಜನರು. |
5. | ಮೂರನೇ ತಿಂಗಳಿನ ಸೈನ್ಯದ ಮೂರನೇ ಅಧಿಪತಿಯು ಮುಖ್ಯ ನಾಗಿರುವ ಯೆಹೋಯಾದನ ಮಗನಾದ ಬೆನಾ ಯನು; ಅವನ ವರ್ಗದಲ್ಲಿ ಇಪ್ಪತ್ತನಾಲ್ಕು ಸಾವಿರ ಜನರು. |
6. | ಈ ಬೆನಾಯನು ಮೂವತ್ತು ಮಂದಿಯಲ್ಲಿ ಪರಾಕ್ರಮಶಾಲಿಯಾದವನಾಗಿ ಮೂವತ್ತು ಮಂದಿಯ ಮೇಲೆ ಮುಖ್ಯಸ್ಥನಾಗಿದ್ದನು; ಅವನ ವರ್ಗದಲ್ಲಿ ಅವನ ಮಗನಾದ ಅವ್ಮೆಾಜಾಬಾದನು ಇದ್ದನು. |
7. | ನಾಲ್ಕನೇ ತಿಂಗಳಿನ ನಾಲ್ಕನೆಯವನು ಯೋವಾಬನ ಸಹೋ ದರನಾದ ಅಸಾಹೇಲನು; ಅವನ ತರುವಾಯ ಅವನ ಮಗನಾದ ಜೆಬದ್ಯನು; ಅವನ ವರ್ಗದಲ್ಲಿ ಇಪ್ಪತ್ತ ನಾಲ್ಕು ಸಾವಿರ ಜನರು. |
8. | ಐದನೇ ತಿಂಗಳಿನ ಐದನೇ ಅಧಿಪತಿಯು ಇಜ್ರಾಹ್ಯನಾದ ಶಮ್ಹೂತನು; ಅವನ ವರ್ಗದಲ್ಲಿ ಇಪ್ಪತ್ತನಾಲ್ಕು ಸಾವಿರ ಜನರು. |
9. | ಆರನೇ ತಿಂಗಳಿನ ಆರನೆಯವನು ತೆಕೋವಿಯನಾಗಿರುವ ಇಕ್ಕೇಷನ ಮಗನಾದ ಈರನು; ಅವನ ವರ್ಗದಲ್ಲಿ ಇಪ್ಪತ್ತನಾಲ್ಕು ಸಾವಿರ ಜನರು. |
10. | ಏಳನೇ ತಿಂಗಳಿನ ಏಳನೇಯವನು ಎಫ್ರಾಯಾಮನ ಮಕ್ಕಳಲ್ಲಿ ಒಬ್ಬ ನಾಗಿರುವ ಪೆಲೋನ್ಯನಾದ ಹೆಲೆಚನು; ಅವನ ವರ್ಗ ದಲ್ಲಿ ಇಪ್ಪತ್ತನಾಲ್ಕು ಸಾವಿರ ಜನರು. |
11. | ಎಂಟನೇ ತಿಂಗಳಿನ ಎಂಟನೆಯವನು ಜೆರಹೀಯರಲ್ಲಿ ಒಬ್ಬ ನಾಗಿರುವ ಹುಷಾತ್ಯನಾದ ಸಿಬ್ಬೆಕೈಯು; ಅವನ ವರ್ಗ ದಲ್ಲಿ ಇಪ್ಪತ್ತನಾಲ್ಕು ಸಾವಿರ ಜನರು; |
12. | ಒಂಭತ್ತನೇ ತಿಂಗಳಿನ ಒಂಭತ್ತನೆಯವನು ಬೆನ್ಯಾವಿಾನ್ಯರಲ್ಲಿ ಒಬ್ಬನಾಗಿರುವ ಅನತೋತ್ಯನಾದ ಅಬೀಯೆಜೆರನು; ಅವನ ವರ್ಗದಲ್ಲಿ ಇಪ್ಪತ್ತುನಾಲ್ಕು ಸಾವಿರ ಜನರು. |
13. | ಹತ್ತನೇ ತಿಂಗಳಿನ ಹತ್ತನೆಯವನು ಜೆರಹೀಯರಲ್ಲಿ ಒಬ್ಬನಾಗಿರುವ ನೆಟೋಫದವನಾದ ಮಹರೈಯು; ಅವನ ವರ್ಗದಲ್ಲಿ ಇಪ್ಪತ್ತನಾಲ್ಕುಸಾವಿರ ಜನರು. |
14. | ಹನ್ನೊಂದನೇ ತಿಂಗಳಿನ ಹನ್ನೊಂದನೆಯವನು ಎಫ್ರಾಯಾಮನ ಮಕ್ಕಳಲ್ಲಿ ಒಬ್ಬನಾಗಿರುವ ಪಿರ್ರಾ ತೋನ್ಯನಾದ ಬೆನಾಯನು; ಅವನ ವರ್ಗದಲ್ಲಿ ಇಪ್ಪತ್ತನಾಲ್ಕು ಸಾವಿರ ಜನರು. |
15. | ಹನ್ನೆರಡನೇ ತಿಂಗ ಳಿನ ಹನ್ನೆರಡನೆಯವನು ಒತ್ನೀಯೇಲನ ಮಕ್ಕಳಲ್ಲಿ ಒಬ್ಬನಾಗಿರುವ ನೆಟೋಫದವನಾದ ಹೆಲ್ದೈಯು; ಅವನ ವರ್ಗದಲ್ಲಿ ಇಪ್ಪತ್ತನಾಲ್ಕು ಸಾವಿರ ಜನರು. |
16. | ಇಸ್ರಾಯೇಲಿನ ಗೋತ್ರಗಳ ಮೇಲೆ ಇರುವ ವರು ಯಾರಂದರೆ, ರೂಬೇನ್ಯರ ನಾಯಕನು ಜಿಕ್ರೀಯ ಮಗನಾದ ಎಲೀಯೆಜೆರನು. |
17. | ಸಿಮೆಯೋನ್ಯರಿಗೆ ಮಾಕನ ಮಗನಾದ ಶೆಫಟ್ಯನು. ಲೇವಿಯರಿಗೆ ಕೆಮು ವೇಲನ ಮಗನಾದ ಹಷಬ್ಯನು. ಆರೋನ್ಯರಿಗೆ ಚಾದೋಕನು; |
18. | ಯೆಹೂದನಿಗೆ ದಾವೀದನ ಸಹೋ ದರರಲ್ಲಿ ಒಬ್ಬನಾಗಿರುವ ಎಲೀಹುವು; ಇಸ್ಸಾಕಾರನಿಗೆ ವಿಾಕಾಯೇಲನ ಮಗನಾದ ಒಮ್ರಿಯು; |
19. | ಜೆಬು ಲೋನನಿಗೆ, ಒಬದ್ಯನ ಮಗನಾದ ಇಷ್ಮಾಯನು; ನಫ್ತಾಲಿಯ ಗೋತ್ರಕ್ಕೆ ಅಜ್ರಿಯೇಲನ ಮಗನಾದ ಯೆರೀಮೋತನು; |
20. | ಎಫ್ರಾಯಾಮನ ಮಕ್ಕಳಿಗೆ ಅಜಜ್ಯನ ಮಗನಾದ ಹೊಷೇಯನು; ಮನಸ್ಸೆಯ ಅರ್ಧಗೋತ್ರಕ್ಕೆ ಪೆದಾಯನ ಮಗನಾದ ಯೋವೇ ಲನು. |
21. | ಗಿಲ್ಯಾದಿನಲ್ಲಿರುವ ಮನಸ್ಸೆಯ ಅರ್ಧ ಗೋತ್ರಕ್ಕೆ ಜೆಕರ್ಯನ ಮಗನಾದ ಇದ್ದೋನು, ಬೆನ್ಯಾವಿಾನನ ಗೋತ್ರಕ್ಕೆ ಅಬ್ನೇರನ ಮಗನಾದ ಯಗಸೀಯೇಲನು. ದಾನನ ಗೋತ್ರಕ್ಕೆ ಯೆರೋ ಹಾಮನ ಮಗನಾದ ಅಜರೇಲನು. |
22. | ಇವರೇ ಇಸ್ರಾ ಯೇಲಿನ ಗೋತ್ರಗಳ ಪ್ರಧಾನರು. |
23. | ಆದರೆ ದಾವೀದನು ಇಪ್ಪತ್ತು ವರುಷಗಳೊಳಗೆ ಇದ್ದವರ ಲೆಕ್ಕತಕ್ಕೊಳ್ಳಲಿಲ್ಲ. ಯಾಕಂದರೆ ಇಸ್ರಾ ಯೇಲ್ಯರನ್ನು ಆಕಾಶದ ನಕ್ಷತ್ರಗಳ ಹಾಗೆ ಹೆಚ್ಚಾಗಿ ಮಾಡುವೆನೆಂದು ಕರ್ತನು ಹೇಳಿದ್ದನು. |
24. | ಚೆರೂಯಳ ಮಗನಾದ ಯೋವಾಬನು ಎಣಿಸಲು ಆರಂಭಿ ಸಿದನು; ಆದರೆ ಇಸ್ರಾಯೇಲಿಗೆ ವಿರೋಧವಾಗಿ ದೇವರ ರೌದ್ರವು ಬಂದದ್ದರಿಂದ ಅವನು ಪೂರ್ತಿ ಗೊಳಿಸಲಿಲ್ಲ; ಆ ಲೆಕ್ಕವು ಅರಸನಾದ ದಾವೀದನ ವೃತಾಂತಗಳ ಪುಸ್ತಕದಲ್ಲಿ ಸೇರಲಿಲ್ಲ. |
25. | ಅರಸನ ಬೊಕ್ಕಸಗಳ ಮೇಲೆ ಅಡಿಯೇಲನ ಮಗನಾದ ಅಜ್ಮಾವೆತನು ಇದ್ದನು. ಹೊಲಗಳಲ್ಲಿಯೂ ಪಟ್ಟಣಗಳಲ್ಲಿಯೂ ಗ್ರಾಮಗಳಲ್ಲಿಯೂ ಗಡೀ ಸ್ಥಳ ಗಳಲ್ಲಿಯೂ ಇದ್ದ ಉಗ್ರಾಣಗಳ ಮೇಲೆ ಉಜ್ಜೀ ಯನ ಮಗನಾದ ಯೋನಾತಾನನು ಇದ್ದನು. |
26. | ಹೊಲದಲ್ಲಿ ವ್ಯವಸಾಯ ಮಾಡುವ ಕೆಲಸದವರ ಮೇಲೆ ಕೆಲೂಬನ ಮಗನಾದ ಎಜ್ರೀಯು ಇದ್ದನು. |
27. | ಬಹಳ ದ್ರಾಕ್ಷೇ ತೋಟಗಳ ಮೇಲೆ ರಾಮಾ ಊರಿನ ಶಿಮ್ಮನು ಇದ್ದನು; ಅಲೆಗೋಸ್ಕರ ದ್ರಾಕ್ಷೇ ತೋಟಗಳ ಫಲದ ಮೇಲೆ ಶಿಪ್ಮಿಯನಾದ ಜಬ್ದೀಯು ಇದ್ದನು. |
28. | ತಗ್ಗಿನಲ್ಲಿರುವ ಇಪ್ಪೆ ಮರಗಳ ಮೇಲೆಯೂ ಅತ್ತಿ ಮರಗಳ ಮೇಲೆಯೂ ಗೆದೆರೂರಿನವನಾದ ಬಾಳ್ಹಾನಾನನು ಇದ್ದನು; ಎಣ್ಣೆಯ ಉಗ್ರಾಣಗಳ ಮೇಲೆ ಯೋವಾಷನು ಇದ್ದನು. |
29. | ಶಾರೋನಿನಲ್ಲಿ ಮೇಯಿಸುವ ದನಗಳ ಮೇಲೆ ಶಾರೋನಿನವನಾದ ಶಿಟ್ರೈ ಇದ್ದನು; ತಗ್ಗುಗಳಲ್ಲಿರುವ ದನಗಳ ಮೇಲೆ ಅದ್ಲೈಯ ಮಗನಾದ ಶಾಫಾಟನು ಇದ್ದನು. |
30. | ಒಂಟೆಗಳ ಮೇಲೆ ಇರುವವನು ಇಷ್ಮಾ ಯೇಲ್ಯನಾದ ಓಬೀಲನು; ಕತ್ತೆಗಳ ಮೇಲೆ ಇರುವ ವನು ಮೇರೊನೋತಿನವನಾದ ಯೆಹ್ದೆಯನು. |
31. | ಕುರಿ ಮಂದೆಗಳ ಮೇಲೆ ಇರುವವನು ಹಗ್ರೀಯನಾದ ಯಾಜೀಜನು. ಇವೆರಲ್ಲರೂ ಅರಸನಾದ ದಾವೀದನ ಸ್ವಾಸ್ಥ್ಯದ ಮೇಲೆ ಪ್ರಧಾನರಾಗಿದ್ದರು. |
32. | ಇದಲ್ಲದೆ ದಾವೀದನ ಚಿಕ್ಕಪ್ಪನಾದ ಯೋನಾತಾನನು ಗ್ರಹಿಕೆಯುಳ್ಳವನಾಗಿ ಆಲೋಚನೆಯುಳ್ಳ ಲೇಖಕನೂ ಆಗಿದ್ದನು. ಹಕ್ಮೋನನಾದ ಯೆಹೀಯೇ ಲನು ಅರಸನ ಕುಮಾರರ ಸಂಗಡ ಇದ್ದನು. |
33. | ಅರಸನ ಆಲೋಚನೆಗಾರನು ಅಹೀತೋಫೆಲನು, ಅರಸನ ಸ್ನೇಹಿತನು ಅರ್ಕೀಯನಾದ ಹೂಷೈಯು. |
34. | ಅಹೀ ತೋಫೆಲನ ತರುವಾಯ ಬೆನಾಯನ ಮಗನಾದ ಯೆಹೋಯಾದಾವನೂ ಎಬ್ಯಾತಾರನೂ. ಅರಸನ ಸೈನ್ಯದ ಅಧಿಪತಿಯು ಯೋವಾಬನು. |
← 1Chronicles (27/29) → |