← 1Chronicles (23/29) → |
1. | ಹೀಗೆ ದಾವೀದನು ಮುದುಕನಾಗಿಯೂ ದಿವಸಗಳು ತುಂಬಿದವನಾಗಿಯೂ ಇರು ವಾಗ ತನ್ನ ಮಗನಾದ ಸೊಲೊಮೋನನನ್ನು ಇಸ್ರಾ ಯೇಲಿನ ಮೇಲೆ ಅರಸನನ್ನಾಗಿ ಮಾಡಿದನು. |
2. | ಇದ ಲ್ಲದೆ ತಾನು ಇಸ್ರಾಯೇಲಿನ ಸಮಸ್ತ ಪ್ರಧಾನರನ್ನೂ ಯಾಜಕರನ್ನೂ ಲೇವಿಯರನ್ನೂ ಒಟ್ಟುಗೂಡಿಸಿ ಬರ ಮಾಡಿದನು. |
3. | ಲೇವಿಯರು ಮೂವತ್ತು ವರುಷ ಪ್ರಾಯದವರು ಮೊದಲುಗೊಂಡು ಲೆಕ್ಕಿಸಲ್ಪಟ್ಟಿದ್ದರು. ಅವರ ಪುರುಷರ ಲೆಕ್ಕವು ತಲೆ ತಲೆಯ ಪ್ರಕಾರ ಮೂವತ್ತೆಂಟು ಸಾವಿರ ವಾಗಿತ್ತು. |
4. | ಇವರಲ್ಲಿ ಇಪ್ಪತ್ತನಾಲ್ಕು ಸಾವಿರ ಮಂದಿ ಕರ್ತನ ಮನೆಯ ಕೆಲಸವನ್ನು ನಡಿಸುವವರಾಗಿದ್ದರು; ಆರು ಸಾವಿರ ಮಂದಿ ಪಾರುಪತ್ಯಗಾರರೂ ನ್ಯಾಯಾಧಿ ಪತಿಗಳೂ ಆಗಿದ್ದರು. |
5. | ಇದಲ್ಲದೆ ನಾಲ್ಕು ಸಾವಿರ ಮಂದಿ ದ್ವಾರಪಾಲಕರಾಗಿದ್ದರು; ನಾಲ್ಕು ಸಾವಿರ ಮಂದಿ ಸ್ತುತಿಸುವದಕ್ಕೆ ದಾವೀದನು ಸಿದ್ಧಮಾಡಿದ ವಾದ್ಯಗಳಿಂದ ಕರ್ತನನ್ನು ಸ್ತುತಿಸಿದರು. |
6. | ಗೇರ್ಷೋನನು ಕೆಹಾತನು ಮೆರಾರೀಯು ಎಂಬ ಲೇವಿಯ ಮಕ್ಕಳಲ್ಲಿ ಅವರನ್ನು ವರ್ಗಗಳಾಗಿ ದಾವೀ ದನು ವಿಭಾಗಿಸಿದನು. |
7. | ಗೇರ್ಷೋನ್ಯರಲ್ಲಿ ಲದ್ದಾನನು ಶಿವ್ಮೆಾ: ಲದ್ದಾನನ ಕುಮಾರರು -- |
8. | ಮುಖ್ಯಸ್ಥರಾದ ಯೆಹೀಯೇಲನು ಜೇತಾಮನು ಯೋವೇಲನು ಎಂಬ ಮೂರು ಮಂದಿಯು. |
9. | ಶಿಮ್ಮಿಯ ಕುಮಾರರು ಶೆಲೋಮೊ ತನು ಹಜೀಯೇಲನು ಹಾರಾನನು ಎಂಬ ಮೂರು ಮಂದಿಯು. |
10. | ಇವರು ಲದ್ದಾನನ ಪಿತೃಗಳಲ್ಲಿ ಮುಖ್ಯಸ್ಥ ರಾಗಿದ್ದರು. ಶಿಮ್ಮನ ಕುಮಾರರು--ಯಹತನು ಜೀನನು ಯೆಯೂಷನು ಬೆರೀಯನು. |
11. | ಶಿಮ್ಮನ ಈ ನಾಲ್ಕು ಮಂದಿ ಕುಮಾರರಲ್ಲಿ ಯಹತನು ಮುಖ್ಯಸ್ಥನು. ಜೀಜನು ಎರಡನೆಯವನಾಗಿದ್ದನು; ಆದರೆ ಯೆಯೂಷ ನಿಗೂ ಬೆರೀಯನಿಗೂ ಬಹಳ ಮಂದಿ ಮಕ್ಕಳು ಇಲ್ಲ ದ್ದರಿಂದ ಇವರು ತಮ್ಮ ತಂದೆಯ ಮನೆಯಲ್ಲಿ ಒಂದೇ ಲೆಕ್ಕವಾಗಿ ಎಣಿಸಲ್ಪಟ್ಟಿದ್ದರು. |
12. | ಕೆಹಾತನ ಕುಮಾರರು--ಅಮ್ರಾಮನು, ಇಚ್ಹಾ ರನು, ಹೆಬ್ರೋನನು, ಉಜ್ಜಿಯೇಲನು ಎಂಬ ಈ ನಾಲ್ಕು ಮಂದಿಯು. |
13. | ಅಮ್ರಾಮನ ಕುಮಾರರು --ಆರೋನನು ಮೋಶೆಯು; ಆರೋನನು ಯುಗ ಯುಗಾಂತರಕ್ಕೂ ಕರ್ತನ ಮುಂದೆ ಧೂಪ ಸುಡು ವದಕ್ಕೂ ಆತನಿಗೆ ಸೇವೆಮಾಡುವದಕ್ಕೂ ಆತನ ಹೆಸರಿನಲ್ಲಿ ಆಶೀರ್ವದಿಸುವದಕ್ಕೂ ತಾನೂ ತನ್ನ ಕುಮಾರರೂ ಯುಗಯುಗಾಂತರಗಳಿಗೂ ಅತಿ ಪರಿ ಶುದ್ಧವಾದವುಗಳನ್ನು ಪ್ರತಿಷ್ಠೆಮಾಡುವದಕ್ಕೂ ಪ್ರತ್ಯೇ ಕಿಸಲ್ಪಟ್ಟನು. |
14. | ದೇವರ ಮನುಷ್ಯನಾದ ಮೋಶೆಯ ಕುಮಾರರು ಲೇವಿಯ ಗೋತ್ರದಲ್ಲಿ ಲೆಕ್ಕಿಸಲ್ಪಟ್ಟಿದ್ದರು. |
15. | ಮೋಶೆಯ ಕುಮಾರರು--ಗೇರ್ಷೋಮನು ಎಲೀ ಯೆಜೆರನು. |
16. | ಗೇರ್ಷೋಮನ ಕುಮಾರರಲ್ಲಿ ಶೆಬೂ ವೇಲನು ಮುಖ್ಯಸ್ಥನಾಗಿದ್ದನು. |
17. | ಎಲೀಯೆಜೆರನ ಕುಮಾರರು -- ಮುಖ್ಯಸ್ಥನಾದ ರೆಹಬ್ಯನು. ಇವನ ಹೊರತಾಗಿ ಎಲೀಯೆಜೆರನಿಗೆ ಬೇರೆ ಕುಮಾರರಿಲ್ಲ; ಆದರೆ ರೆಹಬ್ಯನ ಕುಮಾರರು ಬಹಳ ಮಂದಿ ಇದ್ದರು. |
18. | ಇಚ್ಹಾರನ ಕುಮಾರರಲ್ಲಿ ಶೆಲೋಮೊತನು ಮುಖ್ಯಸ್ಥನಾಗಿದ್ದನು. |
19. | ಹೆಬ್ರೋನನ ಕುಮಾರರಲ್ಲಿ ಯೆರೀಯ ಮೊದಲನೆಯವನು, ಅಮರ್ಯನು ಎರ ಡನೆಯವನು, ಯಹಜೀಯೇಲನು ಮೂರನೆಯ ವನು, ಯೆಕಮ್ಮಾಮನು ನಾಲ್ಕನೆಯವನು. |
20. | ಉಜ್ಜೀ ಯೇಲನ ಕುಮಾರರಲ್ಲಿ ವಿಾಕನು ಮೊದಲನೆಯವನು, ಇಷ್ಷೀಯನು ಎರಡನೆಯವನು. |
21. | ಮೆರಾರೀಯ ಕುಮಾರರು--ಮಹ್ಲೀಯು, ಮೂಷೀಯು. ಮಹ್ಲೀಯ ಕುಮಾರರು--ಎಲ್ಲಾಜಾರ್, ಕೀಷನು; |
22. | ಎಲ್ಲಾಜಾರ್ ಸತ್ತನು. ಅವನಿಗೆ ಕುಮಾರ ರಿಲ್ಲ, ಕುಮಾರ್ತೆಯರು ಮಾತ್ರ ಇದ್ದರು; ಅವರ ಸಹೋದರರಾದ ಕೀಷನ ಕುಮಾರರು ಅವರನ್ನು ತೆಗೆದುಕೊಂಡರು. |
23. | ಮೂಷೀಯ ಕುಮಾರರು-- ಮಹ್ಲೀಯು ಏದೆರ್ ಯೆರೇಮೋತ್ ಈ ಮೂರು ಮಂದಿ. |
24. | ಇವರು ತಮ್ಮ ಪಿತೃಗಳ ವಂಶದ ಪ್ರಕಾರವಾಗಿ ಲೇವಿಯ ಕುಮಾರರಾಗಿದ್ದರು; ಇವರು ತಮ್ಮ ಹೆಸರು ಗಳಿಂದಲೂ ತಮ್ಮ ತಲೆಗಳಿಂದಲೂ ಎಣಿಸಲ್ಪಟ್ಟಿದ್ದ ತಮ್ಮ ಪಿತೃಗಳಲ್ಲಿ ಮುಖ್ಯಸ್ಥರಾಗಿದ್ದರು; ಇಪ್ಪತ್ತು ವರುಷ ಪ್ರಾಯದವರು ಮೊದಲುಗೊಂಡು ಕರ್ತನ ಮನೆಯ ಸೇವೆಗೋಸ್ಕರ ಕೆಲಸ ಮಾಡಿದರು. |
25. | ಅವರು ಯುಗ ಯುಗಾಂತರಕ್ಕೂ ಇಸ್ರಾಯೇಲಿನಲ್ಲಿ ವಾಸಿಸುವ ಹಾಗೆ ಇಸ್ರಾಯೇಲಿನ ದೇವರಾದ ಕರ್ತನು ತನ್ನ ಜನರಿಗೆ ವಿಶ್ರಾಂತಿಯನ್ನು ಕೊಟ್ಟಿದ್ದಾನೆ ಎಂದು ದಾವೀದನು ಹೇಳಿ |
26. | ಲೇವಿಯರನ್ನು ಕುರಿತು ಅವರು ಗುಡಾರವನ್ನೂ ಅದರ ಸೇವೆಗೋಸ್ಕರ ಅದರ ಪಾತ್ರೆಗಳನ್ನೂ ಇನ್ನು ಮೇಲೆ ಹೊರುವ ಕೆಲಸವಿಲ್ಲವೆಂದು ಹೇಳಿದ್ದನು. |
27. | ದಾವೀದನ ಕಡೇಮಾತುಗಳ ಪ್ರಕಾರ ಲೇವಿಯರು ಇಪ್ಪತ್ತುವರುಷ ಮೊದಲುಗೊಂಡು ಅದಕ್ಕೆ ಮೇಲ್ಪಟ್ಟ ಪ್ರಾಯದವರು ಲೆಕ್ಕಿಸಲ್ಪಟ್ಟಿದ್ದರು. |
28. | ಕರ್ತನ ಮನೆಯ ಸೇವೆಗೋಸ್ಕರ ಅಂಗಳಗಳಲ್ಲಿಯೂ ಕೊಠಡಿಗಳ ಲ್ಲಿಯೂ ಸಮಸ್ತ ಪರಿಶುದ್ಧವಾದವುಗಳನ್ನು ಪರಿಶುದ್ಧ ಮಾಡುವದರಲ್ಲಿಯೂ |
29. | ಕರ್ತನ ಮಂದಿರದ ಸೇವೆಯ ಕಾರ್ಯದಲ್ಲಿ ಸಮ್ಮುಖದ ರೊಟ್ಟಿ ಅರ್ಪಣೆ ಬಲಿಯ ನಯವಾದ ಹಿಟ್ಟು ಹುಳಿ ಇಲ್ಲದ ರೊಟ್ಟಿ ಬಾಂಡ್ಲಿಯಲ್ಲಿ ಮಾಡಿದ್ದ ಎಣ್ಣೆಯಲ್ಲಿ ಕರಿದಿದ್ದಕ್ಕೋಸ್ಕರವೂ ಸಮಸ್ತ ವಿವಿಧ ಅಳತೆಗೋಸ್ಕರವೂ ಆರೋನನ ಮಕ್ಕಳಿಗೆ ನೇಮಕವಾಗಿತ್ತು. |
30. | ಇದಲ್ಲದೆ ಉದಯಕಾಲದ ಲ್ಲಿಯೂ ಸಾಯಂಕಾಲದಲ್ಲಿಯೂ ನಿಂತು ಕರ್ತನನ್ನು ಕೊಂಡಾಡುವದಕ್ಕೂ ಸ್ತುತಿಸುವದಕ್ಕೂ ಕರ್ತನ ಮುಂದೆ ನಿರಂತರವಾಗಿ ಅವರಿಗೆ ಆಜ್ಞಾಪಿಸಿದ |
31. | ಕಟ್ಟಳೆಯ ಪ್ರಕಾರವಾಗಿ ಸಬ್ಬತ್ ದಿವಸಗಳಲ್ಲಿಯೂ ಅಮವಾಸ್ಯೆ ಗಳಲ್ಲಿಯೂ ನೇಮಕವಾದ ಹಬ್ಬಗಳಲ್ಲಿಯೂ ಲೆಕ್ಕದ ಪ್ರಕಾರ ಎಲ್ಲಾ ದಹನಬಲಿಗಳನ್ನು ಅರ್ಪಿಸುವದಕ್ಕೂ |
32. | ಕರ್ತನ ಮನೆಯ ಸೇವೆಯಲ್ಲಿ ಸಭೆಯ ಗುಡಾರದ ಕಾವಲಿಯನ್ನೂ ಪರಿಶುದ್ಧಸ್ಥಾನದ ಕಾವಲಿಯನ್ನೂ ತಮ್ಮ ಸಹೋದರರಾದ ಆರೋನನ ಕುಮಾರರ ಆಜ್ಞೆಯನ್ನೂ ಕೈಕೊಳ್ಳುವದಕ್ಕೆ ಅವರಿಗೆ ನೇಮಕವಾಗಿತ್ತು. |
← 1Chronicles (23/29) → |