← 1Chronicles (22/29) → |
1. | ಆಗ ದಾವೀದನು -- ಕರ್ತನಾದ ದೇವರ ಮನೆಯೂ ಇಸ್ರಾಯೇಲಿನ ದಹನಬಲಿ ಪೀಠವೂ ಇದೇ ಅಂದನು. |
2. | ದಾವೀದನು ಇಸ್ರಾಯೇಲಿನ ದೇಶದಲ್ಲಿರುವ ಪರ ದೇಶಸ್ಥರನ್ನು ಕೂಡಿಸಲು ಹೇಳಿ ದೇವರ ಮನೆಯನ್ನು ಕಟ್ಟಿಸುವದಕ್ಕೆ ಕೆತ್ತನೆ ಕಲ್ಲುಗಳನ್ನು ಕಡಿಯುವ ಹಾಗೆ ಕುಟಿಗರನ್ನು ನೇಮಿಸಿದನು. |
3. | ಇದಲ್ಲದೆ ದಾವೀದನು ಬಾಗಲುಗಳ ಕದಗಳನ್ನು ಜೋಡಿಸುವದಕ್ಕೆ ಬೇಕಾದ ಮೊಳೆಗಳಿಗೋಸ್ಕರ ಹೆಚ್ಚಾದ ಕಬ್ಬಿಣವನ್ನೂ ಲೆಕ್ಕವಿಲ್ಲ ದಷ್ಟು ಹೆಚ್ಚಾದ ತಾಮ್ರವನ್ನೂ ಸಿದ್ಧಮಾಡಿಸಿದನು; |
4. | ಲೆಕ್ಕವಿಲ್ಲದಷ್ಟು ದೇವದಾರು ಮರಗಳನ್ನು ಸಿದ್ಧಮಾಡಿ ಸಿದನು; ಚೀದೋನ್ಯರೂ ತೂರ್ಯರೂ ದಾವೀದನಿಗೆ ಹೆಚ್ಚಾಗಿ ದೇವದಾರು ಮರಗಳನ್ನು ತಂದರು. |
5. | ಇದ ಲ್ಲದೆ ದಾವೀದನು--ನನ್ನ ಮಗನಾದ ಸೊಲೊಮೋ ನನು ಹುಡುಗನಾಗಿಯೂ ಮೃದುವಾದವನಾಗಿಯೂ ಇದ್ದಾನೆ; ಕರ್ತನಿಗೆ ಕಟ್ಟಬೇಕಾದ ಮನೆಯೂ ಸಮಸ್ತ ದೇಶಗಳಲ್ಲಿ ಕೀರ್ತಿಯಲ್ಲಿಯೂ ಸೌಂದರ್ಯದ ಲ್ಲಿಯೂ ಅಧಿಕ ಘನವಾಗಿರಬೇಕು; ನಾನು ಅದ ಕ್ಕೋಸ್ಕರ ಈಗ ಸಿದ್ಧಮಾಡುವೆನೆಂದು ಹೇಳಿದನು. ಆದದರಿಂದ ದಾವೀದನು ಸಾಯುವದಕ್ಕಿಂತ ಮುಂಚೆ ಬಹಳವಾಗಿ ಸಿದ್ಧಮಾಡಿದನು. |
6. | ಆಗ ತನ್ನ ಮಗನಾದ ಸೊಲೊಮೋನನನ್ನು ಕರೇ ಕಳುಹಿಸಿ ಇಸ್ರಾಯೇಲಿನ ದೇವರಾದ ಕರ್ತನಿಗೆ ಮನೆ ಯನ್ನು ಕಟ್ಟಿಸಲು ಅವನಿಗೆ ಆಜ್ಞಾಪಿಸಿದನು. |
7. | ದಾವೀ ದನು ಹೇಳಿದ್ದೇನಂದರೆ--ನನ್ನ ಮಗನೇ, ನಾನು ನನ್ನ ದೇವರಾದ ಕರ್ತನ ನಾಮಕ್ಕೆ ಮನೆಯನ್ನು ಕಟ್ಟಿಸ ಬೇಕೆಂಬದು ನನ್ನ ಹೃದಯದಲ್ಲಿ ಇತ್ತು. |
8. | ಆದರೆ ಕರ್ತ ನಿಂದ ನನಗುಂಟಾದ ವಾಕ್ಯವೇನಂದರೆ--ನೀನು ಬಹು ರಕ್ತವನ್ನು ಚೆಲ್ಲಿದ್ದೀ; ಮಹಾಯುದ್ಧಗಳನ್ನು ಮಾಡಿದ್ದೀ; ನೀನು ನನ್ನ ಹೆಸರಿಗೆ ಮನೆಯನ್ನು ಕಟ್ಟಿಸಬೇಡ; ಯಾಕಂದರೆ ನೀನು ನನ್ನ ಸಮ್ಮುಖದಲ್ಲಿ ಭೂಮಿಯ ಮೇಲೆ ಬಹಳ ರಕ್ತವನ್ನು ಸುರಿಸಿದ್ದಿ. |
9. | ಇಗೋ, ಸಮಾ ಧಾನವುಳ್ಳ ಮನುಷ್ಯನಾಗಿರುವ ಒಬ್ಬ ಮಗನು ನಿನಗೆ ಹುಟ್ಟುವನು; ಸುತ್ತಲಿರುವ ಅವನ ಸಮಸ್ತ ಶತ್ರುಗಳಿಂದ ನಾನು ಅವನಿಗೆ ಸಮಾಧಾನವನ್ನು ಕೊಡುವೆನು. ಅವ ನಿಗೆ ಸೊಲೊಮೋನನೆಂಬ ಹೆಸರಾಗುವದು; ಅವನ ದಿವಸಗಳಲ್ಲಿ ನಾನು ಇಸ್ರಾಯೇಲಿಗೆ ಸಮಾಧಾನ ವನ್ನೂ ವಿಶ್ರಾಂತಿಯನ್ನೂ ಕೊಡುವೆನು. |
10. | ಅವನು ನನ್ನ ನಾಮಕ್ಕೆ ಮನೆಯನ್ನು ಕಟ್ಟಿಸುವನು. ಅವನು ನನ್ನ ಮಗನಾಗಿರುವನು, ನಾನು ಅವನಿಗೆ ತಂದೆ ಯಾಗಿರುವೆನು; ಇಸ್ರಾಯೇಲಿನ ಮೇಲೆ ಅವನ ರಾಜ್ಯದ ಸಿಂಹಾಸನವನ್ನು ಯುಗ ಯುಗಾಂತರಕ್ಕೂ ಸ್ಥಿರಪಡಿಸುವೆನು. |
11. | ಈಗ ನನ್ನ ಮಗನೇ, ಕರ್ತನು ನಿನ್ನನ್ನು ಕುರಿತು ಹೇಳಿದ ಪ್ರಕಾರ ನೀನು ಸಫಲವನ್ನು ಹೊಂದುವ ಹಾಗೆಯೂ ನೀನು ನಿನ್ನ ದೇವರಾದ ಕರ್ತನ ಮನೆಯನ್ನು ಕಟ್ಟಿಸುವ ಹಾಗೆಯೂ ಆತನು ನಿನ್ನ ಸಂಗಡ ಇರಲಿ. |
12. | ಆದರೆ ಕರ್ತನು ನಿನಗೆ ಬುದ್ಧಿಯನ್ನೂ ಗ್ರಹಿಕೆಯನ್ನೂ ಕೊಡಲಿ; ಇಸ್ರಾಯೇ ಲನ್ನು ಕುರಿತು ನಿನಗೆ ಆಜ್ಞಾಪಿಸಲಿ; ನಿನ್ನ ದೇವರಾದ ಕರ್ತನ ನ್ಯಾಯಪ್ರಮಾಣವನ್ನು ನೀನು ಕೈಕೊಳ್ಳುವ ಹಾಗೆ |
13. | ಕರ್ತನು ಇಸ್ರಾಯೇಲನ್ನು ಕುರಿತು ಮೋಶೆಗೆ ಆಜ್ಞಾಪಿಸಿದ ನೇಮಗಳನ್ನೂ ನ್ಯಾಯಗಳನ್ನೂ ಕೈಕೊ ಳ್ಳಲು ನೀನು ಜಾಗ್ರತೆಯಾಗಿರು; ಆಗ ಸಫಲವನ್ನು ಹೊಂದುವಿ. ಬಲವಾಗಿರು, ದೃಢವಾಗಿರು; ಭಯಪಡ ಬೇಡ, ಹೆದರಬೇಡ. |
14. | ಇಗೋ, ನನ್ನ ಕಷ್ಟ ಸ್ಥಿತಿಯಲ್ಲಿ ನಾನು ಕರ್ತನ ಮನೆಗೋಸ್ಕರ ಒಂದು ಲಕ್ಷ ಬಂಗಾ ರದ ತಲಾಂತುಗಳನ್ನೂ ಹತ್ತು ಲಕ್ಷ ಬೆಳ್ಳಿಯ ತಲಾಂತು ಗಳನ್ನೂ ಲೆಕ್ಕವಿಲ್ಲದಷ್ಟು ತಾಮ್ರವನ್ನೂ ಕಬ್ಬಿಣವನ್ನೂ ಸಿದ್ಧಮಾಡಿದ್ದೇನೆ; ಅದು ಬಹಳವಾಯಿತು. ಹಾಗೆಯೇ ಮರಗಳನ್ನೂ ಕಲ್ಲುಗಳನ್ನೂ ಸಿದ್ಧಮಾಡಿದ್ದೇನೆ. ನೀನು ಅವುಗಳಿಗೆ ಹೆಚ್ಚಾಗಿ ಸೇರಿಸಬಹುದು. |
15. | ಇದಲ್ಲದೆ ನಿನ್ನ ಬಳಿಯಲ್ಲಿ ಕೆಲಸದವರೂ ಕಲ್ಲು ಕೆಲಸದವರೂ ಕಲ್ಲು ಕುಟಿಗರೂ ಬಡಿಗಿಯವರೂ ಸಮಸ್ತ ವಿವಿಧ ಕೆಲಸದ ಪ್ರವೀಣರೂ ಅನೇಕ ಮಂದಿ ಇದ್ದಾರೆ. |
16. | ಚಿನ್ನ, ಬೆಳ್ಳಿ, ತಾಮ್ರ, ಕಬ್ಬಿಣ ಲೆಕ್ಕವಿಲ್ಲದಷ್ಟು ಇದೆ. ಎದ್ದು ಕೆಲಸಮಾಡು; ಕರ್ತನು ನಿನ್ನ ಸಂಗಡ ಇರಲಿ. |
17. | ಇದಲ್ಲದೆ ದಾವೀದನು ತನ್ನ ಮಗನಾದ ಸೊಲೊ ಮೋನನಿಗೆ ಸಹಾಯ ಮಾಡಲು ಇಸ್ರಾಯೇಲಿನ ಪ್ರಧಾನರಿಗೆ ಆಜ್ಞಾಪಿಸಿ ಹೇಳಿದ್ದೇನಂದರೆ-- |
18. | ನಿಮ್ಮ ದೇವರಾದ ಕರ್ತನು ನಿಮ್ಮ ಸಂಗಡ ಇಲ್ಲವೋ? ಎಲ್ಲಾ ಕಡೆಯಲ್ಲಿ ನಿಮಗೆ ವಿಶ್ರಾಂತಿ ಕೊಟ್ಟಿದ್ದಾನ ಲ್ಲವೋ? ನಿಶ್ಚಯವಾಗಿ ಆತನು ದೇಶನಿವಾಸಿಗಳನ್ನು ನನ್ನ ಕೈಯಲ್ಲಿ ಒಪ್ಪಿಸಿದ್ದರಿಂದ ದೇಶವು ಕರ್ತನ ಮುಂದೆಯೂ ತನ್ನ ಜನರ ಮುಂದೆಯೂ ಸ್ವಾಧೀನ ವಾಯಿತು. |
19. | ನಿಮ್ಮ ದೇವರಾದ ಕರ್ತನನ್ನು ಹುಡು ಕಲು ನಿಮ್ಮ ಹೃದಯವನ್ನೂ ಪ್ರಾಣವನ್ನೂ ಒಪ್ಪಿಸಿ ಕರ್ತನ ಒಡಂಬಡಿಕೆಯ ಮಂಜೂಷದ ದೇವರ ಪರಿ ಶುದ್ಧ ಪಾತ್ರೆಗಳನ್ನು ಕರ್ತನ ನಾಮಕ್ಕೆ ಕಟ್ಟಿಸಲ್ಪಡುವ ಮನೆಯೊಳಗೆ ತರುವ ಹಾಗೆ ಎದ್ದು ಕರ್ತನಾದ ದೇವ ರಿಗೆ ಪರಿಶುದ್ಧ ಸ್ಥಳವನ್ನು ಕಟ್ಟಿಸಿರಿ ಅಂದನು. |
← 1Chronicles (22/29) → |