← 1Chronicles (15/29) → |
1. | ಇದಲ್ಲದೆ ದಾವೀದನ ಪಟ್ಟಣದಲ್ಲಿ ದಾವೀದನು ತನಗೆ ಮನೆಗಳನ್ನು ಕಟ್ಟಿಸಿ ಕೊಂಡು ದೇವರ ಮಂಜೂಷಕ್ಕೋಸ್ಕರ ಸ್ಥಳವನ್ನು ಸಿದ್ಧಮಾಡಿ ಅದರ ನಿಮಿತ್ತ ಗುಡಾರ ಹಾಕಿಸಿದನು. |
2. | ಆಗ ದಾವೀದನು -- ಲೇವಿಯರ ಹೊರತಾಗಿ ಮತ್ತಾರೂ ದೇವರ ಮಂಜೂಷವನ್ನು ಹೊರಬಾರದು; ಯಾಕಂದರೆ ದೇವರ ಮಂಜೂಷವನ್ನು ಹೊರಲೂ ಯುಗಯುಗಕ್ಕೆ ಆತನಿಗೆ ಸೇವೆಮಾಡಲೂ ಕರ್ತನು ಅವರನ್ನು ಆರಿಸಿಕೊಂಡಿದ್ದಾನೆ ಅಂದನು. |
3. | ದಾವೀ ದನು ಕರ್ತನ ಮಂಜೂಷವನ್ನು ತಾನು ಅದಕ್ಕೋಸ್ಕರ ಸಿದ್ಧಮಾಡಿದ ಅದರ ಸ್ಥಳಕ್ಕೆ ತಕ್ಕೊಂಡು ಬರುವ ನಿಮಿತ್ತ ಯೆರೂಸಲೇಮಿಗೆ ಸಮಸ್ತ ಇಸ್ರಾಯೇಲನ್ನು ಕೂಡಿಸಿ ಬರಮಾಡಿದನು. |
4. | ಇದಲ್ಲದೆ ದಾವೀದನು ಆರೋನನ ಮಕ್ಕಳನ್ನೂ ಲೇವಿಯರನ್ನೂ ಬರಮಾಡಿದನು. |
5. | ಕೆಹಾತನ ಕುಮಾರರಲ್ಲಿ ಮುಖ್ಯಸ್ಥನಾದ ಉರೀ ಯೇಲನೂ ಅವನ ಸಹೋದರರಾದ ನೂರ ಇಪ್ಪತ್ತು ಮಂದಿಯೂ; |
6. | ಮೆರಾರೀಯ ಕುಮಾರರಲ್ಲಿ ಮುಖ್ಯಸ್ಥ ನಾದ ಅಸಾಯನೂ ಅವನ ಸಹೋದರರಾದ ಇನ್ನೂರ ಇಪ್ಪತ್ತು ಮಂದಿಯೂ; |
7. | ಗೆರ್ಷೋಮನ ಕುಮಾರರಲ್ಲಿ ಮುಖ್ಯಸ್ಥನಾದ ಯೋವೇಲನೂ ಅವನ ಸಹೋದರ ರಾದ ನೂರ ಮೂವತ್ತು ಮಂದಿಯೂ; |
8. | ಎಲೀ ಚಾಫಾನನ ಕುಮಾರರಲ್ಲಿ ಮುಖ್ಯಸ್ಥನಾದ ಶೆಮಾ ಯನೂ ಅವನ ಸಹೋದರರಾದ ಇನ್ನೂರು ಮಂದಿಯೂ; |
9. | ಹೆಬ್ರೋನನ ಕುಮಾರರಲ್ಲಿ ಮುಖ್ಯಸ್ಥ ನಾದ ಎಲೀಯೇಲನೂ ಅವನ ಸಹೋದರರಾದ ಎಂಭತ್ತು ಮಂದಿಯೂ; |
10. | ಉಜ್ಜೀಯೇಲನ ಕುಮಾರ ರಲ್ಲಿ ಮುಖ್ಯಸ್ಥನಾದ ಅವ್ಮೆಾನಾದಾಬನೂ ಅವನ ಸಹೋದರರಾದ ನೂರ ಹನ್ನೆರಡು ಮಂದಿಯೂ. |
11. | ಆಗ ದಾವೀದನು ಚಾದೋಕ್, ಎಬ್ಯಾತ್ಯಾರ್ ಎಂಬ ಯಾಜಕರನ್ನೂ ಉರೀಯೇಲ್, ಅಸಾಯನು, ಯೋವೇಲನು, ಶೆಮಾಯನು, ಎಲೀಯೇಲನು, ಅವ್ಮೆಾನಾದಾಬ ಎಂಬ ಲೇವಿಯರನ್ನೂ ಕರೇಕಳುಹಿಸಿ ಅವರಿಗೆ ಹೇಳಿದ್ದೇನಂದರೆ-- |
12. | ನೀವು ಲೇವಿಯರ ಪಿತೃಗಳಲ್ಲಿ ಮುಖ್ಯಸ್ಥರಾದದರಿಂದ ಇಸ್ರಾಯೇಲಿನ ದೇವರಾದ ಕರ್ತನ ಮಂಜೂಷವನ್ನು ನಾನು ಅದ ಕ್ಕೋಸ್ಕರ ಸಿದ್ಧಮಾಡಿದ ಸ್ಥಳಕ್ಕೆ ನೀವು ತರುವ ಹಾಗೆ ನಿಮ್ಮನ್ನೂ ನಿಮ್ಮ ಸಹೋದರರನ್ನೂ ಪರಿಶುದ್ಧ ಮಾಡಿಕೊಳ್ಳಿರಿ. |
13. | ನೀವು ಮೊದಲಿನ ಹಾಗೆ ಮಾಡದೆ ಇದದ್ದರಿಂದ ಕರ್ತನಾದ ನಮ್ಮ ದೇವರು ನಮ್ಮಲ್ಲಿ ಒಂದು ಒಡಕು ಬರುವಂತೆ ಮಾಡಿದನು. ನ್ಯಾಯದ ಪ್ರಕಾರ ನಾವು ಆತನನ್ನು ಹುಡುಕಲಿಲ್ಲ ಅಂದನು. |
14. | ಆಗ ಇಸ್ರಾಯೇಲಿನ ದೇವರಾದ ಕರ್ತನ ಮಂಜೂ ಷವನ್ನು ತರುವದಕ್ಕೆ ಯಾಜಕರೂ ಲೇವಿಯರೂ ತಮ್ಮನ್ನು ಪರಿಶುದ್ಧ ಮಾಡಿಕೊಂಡರು. |
15. | ಮೋಶೆಯು ಆಜ್ಞಾಪಿಸಿದ ಕರ್ತನ ವಾಕ್ಯದ ಪ್ರಕಾರ ಲೇವಿಯರ ಮಕ್ಕಳು ಕೋಲುಗಳನ್ನು ಹಾಕಿ ದೇವರ ಮಂಜೂಷ ವನ್ನು ತಮ್ಮ ಹೆಗಲುಗಳ ಮೇಲೆ ಹೊತ್ತುಕೊಂಡು ಹೋದರು. |
16. | ಇದಲ್ಲದೆ ದಾವೀದನು ವಿಶೇಷವಾದ ವೀಣೆ ಗಳನ್ನೂ ಕಿನ್ನರಿಗಳನ್ನೂ ತಾಳಗಳನ್ನೂ ಬಾರಿಸಿ ಸಂತೋಷದಿಂದ ಸ್ವರವನ್ನು ಎತ್ತುವ ಹಾಗೆ ತಮ್ಮ ಸಹೋದರರಲ್ಲಿ ಹಾಡುಗಾರರನ್ನು ನೇಮಿಸುವ ದಕ್ಕೆ ಲೇವಿಯರ ಪ್ರಧಾನರಿಗೆ ಆಜ್ಞಾಪಿಸಿದನು. |
17. | ಹಾಗೆಯೇ ಲೇವಿಯರು ಯೋವೇಲನ ಮಗನಾದ ಹೇಮಾನನನ್ನೂ ಅವನ ಸಹೋದರರಲ್ಲಿ ಬೆರೆಕ್ಯನ ಮಗನಾದ ಆಸಾಫನನ್ನೂ ಮೆರಾರಿಯ ಕುಮಾರರ ಸಹೋದರರಲ್ಲಿ ಕೂಷಾಯನ ಮಗನಾದ ಎತಾನ ನನ್ನೂ ನೇಮಿಸಿದರು. |
18. | ಅವರ ಸಂಗಡ ಎರಡನೇ ತರಗತಿಯ ತಮ್ಮ ಸಹೋದರರಾಗಿರುವ ಜೆಕರ್ಯ ನನ್ನೂ ಬೇನ್‌ನನ್ನೂ ಯಾಜೀಯೇಲನನ್ನೂ ಶೆವಿಾರಾ ಮೋತನನ್ನೂ ಯೆಹೀಯೇಲನನ್ನೂ ಉನ್ನಿಯನ್ನೂ ಎಲೀಯಾಬನನ್ನೂ ಬೆನಾಯನನ್ನೂ ಮಾಸೇಯನನ್ನೂ ಮತ್ತಿತ್ಯನನ್ನೂ ಎಲೀಫೆಲೇಹುವನ್ನೂ ಮಿಕ್ನೇಯನನ್ನೂ ದ್ವಾರಪಾಲಕರಾದ ಒಬೇದೆದೋಮನನ್ನೂ ಯೆಗೀ ಯೇಲನನ್ನೂ ನೇಮಿಸಿದರು. |
19. | ಹಾಡುಗಾರರಾದ ಹೇಮಾನನೂ ಆಸಾಫನೂ ಏತಾನನೂ ತಾಮ್ರದ ತಾಳಗಳನ್ನು ಬಾರಿಸುವದಕ್ಕೂ |
20. | ಜೆಕರ್ಯನೂ ಅಜೀಯೇಲನೂ ಶೆವಿಾರಾಮೋತನೂ ಯೆಹೀ ಯೇಲನೂ ಉನ್ನಿಯೂ ಎಲೀಯಾಬನೂ ಮಾಸೇ ಯನೂ ಬೆನಾಯನೂ ಅಲಮೋತಿನಿಂದ ವೀಣೆಗಳನ್ನು ಬಾರಿಸುವದಕ್ಕೂ; |
21. | ಮತ್ತಿತ್ಯನೂ ಎಲೀಫೆಲೇಹುವೂ ಮಿಕ್ನೇಯನೂ ಒಬೇದೆದೋಮನೂ ಯೆಗೀಯೇ ಲನೂ ಅಜಜ್ಯನೂ ಹೆಚ್ಚಳವಾಗಿ ಶಿಮಿನೇಟನಿಂದ ಕಿನ್ನರಿಗಳನ್ನು ಬಾರಿಸುವದಕ್ಕೂ ನೇಮಿಸಲ್ಪಟ್ಟಿದ್ದರು. |
22. | ಆದರೆ ಲೇವಿಯರ ಪ್ರಧಾನನಾದ ಕೆನನ್ಯನು ಹಾಡು ವದಕ್ಕೆ ನೇಮಿಸಲ್ಪಟ್ಟಿದ್ದನು. ಅವನು ಗ್ರಹಿಕೆಯುಳ್ಳವನಾ ದದರಿಂದ ಹಾಡುವದಕ್ಕೆ ಕಲಿಸುತ್ತಿದ್ದನು. |
23. | ಬೆರಕ್ಯನೂ ಎಲ್ಕಾನನೂ ಮಂಜೂಷಕ್ಕೆ ದ್ವಾರಪಾಲಕರಾಗಿದ್ದರು. |
24. | ಯಾಜಕರಾದ ಶೆಬನ್ಯನೂ ಯೋಷಾಫಾಟನೂ ನೆತನೇಲ್‌ನೂ ಅಮಾಸೈಯು ಜೆಕರ್ಯನೂ ಬೆನಾಯನೂ ಎಲೀಯೆಜೆರನೂ ದೇವರ ಮಂಜೂಷದ ಮುಂದೆ ತುತೂರಿಗಳನ್ನು ಊದುತ್ತಾ ಇದ್ದರು; ಒಬೇದೆ ದೋಮನೂ ಯೆಹೀಯನೂ ಮಂಜೂಷಕ್ಕೆ ದ್ವಾರ ಪಾಲಕರಾಗಿದ್ದರು. |
25. | ಹೀಗೆಯೇ ದಾವೀದನೂ ಇಸ್ರಾಯೇಲಿನ ಹಿರಿ ಯರೂ ಸಹಸ್ರಗಳ ಮೇಲೆ ಇರುವ ಅಧಿಪತಿಗಳೂ ಸಂತೋಷವಾಗಿ ಒಬೇದೆದೋಮನ ಮನೆಯೊಳಗಿಂದ ಕರ್ತನ ಒಡಂಬಡಿಕೆಯ ಮಂಜೂಷವನ್ನು ತರಲು ಹೋದರು. |
26. | ದೇವರು ಕರ್ತನ ಒಡಂಬಡಿಕೆಯ ಮಂಜೂಷವನ್ನು ಹೊರಲು ಲೇವಿಯರಿಗೆ ಸಹಾಯ ಕೊಟ್ಟದ್ದರಿಂದ ಅವರು ಏಳು ಹೋರಿಗಳನ್ನೂ ಏಳು ಟಗರುಗಳನ್ನೂ ಬಲಿಯಾಗಿ ಅರ್ಪಿಸಿದರು. |
27. | ದಾವೀ ದನೂ ಮಂಜೂಷವನ್ನು ಹೊರುವ ಲೇವಿಯರೂ ಹಾಡುಗಾರರೂ ಹಾಡುಗಾರರ ಸಂಗಡ ಇರುವ ಸಂಗೀತದ ಯಜಮಾನನಾದ ಕೆನನ್ಯನೂ ನಯವಾದ ನಾರಿನ ಮೇಲಂಗಿಯನ್ನು ಧರಿಸಿಕೊಂಡಿದ್ದರು. ಇದ ಲ್ಲದೆ ದಾವೀದನ ಮೇಲೆ ನಾರಿನ ಎಫೋದು ಇತ್ತು. |
28. | ಸಮಸ್ತ ಇಸ್ರಾಯೇಲ್ಯರು ಆರ್ಭಟದಿಂದಲೂ ಕೊಂಬಿನ ಶಬ್ದದಿಂದಲೂ ತುತೂರಿಗಳಿಂದಲೂ ತಾಳ ಗಳಿಂದಲೂ ವೀಣೆಗಳನ್ನೂ ಕಿನ್ನರಿಗಳನ್ನೂ ಬಾರಿಸು ವದರಿಂದಲೂ ಕರ್ತನ ಒಡಂಬಡಿಕೆಯ ಮಂಜೂಷ ವನ್ನು ತಂದರು. |
29. | ಕರ್ತನ ಒಡಂಬಡಿಕೆಯ ಮಂಜೂ ಷವು ದಾವೀದನ ಪಟ್ಟಣದಲ್ಲಿ ಸೇರಿದಾಗ ಏನಾಯಿ ತಂದರೆ, ಸೌಲನ ಮಗಳಾದ ವಿಾಕಳು ಕುಣಿಯುತ್ತಾ ಆಡುತ್ತಾ ಇರುವ ಅರಸನಾದ ದಾವೀದನನ್ನು ಕಿಟಿಕಿ ಯಿಂದ ನೋಡಿ ತನ್ನ ಹೃದಯದಲ್ಲಿ ಅವನನ್ನು ಹೀನೈಸಿದಳು. |
← 1Chronicles (15/29) → |