← 1Chronicles (11/29) → |
1. | ಇಸ್ರಾಯೇಲ್ಯರೆಲ್ಲರು ಹೆಬ್ರೋನಿನಲ್ಲಿದ್ದ ದಾವೀದನ ಬಳಿಗೆ ಕೂಡಿಬಂದು ಹೇಳಿ ದ್ದೇನಂದರೆ--ಇಗೋ, ನಾವು ನಿನ್ನ ಎಲುಬೂ ನಿನ್ನ ಮಾಂಸವೂ ಆಗಿದ್ದೇವೆ. |
2. | ಇದಲ್ಲದೆ ಪೂರ್ವದಲ್ಲಿ ಸೌಲನು ಅರಸನಾಗಿದ್ದಾಗ ನೀನು ಇಸ್ರಾಯೇಲನ್ನು ಹೊರಗೆ ನಡಿಸುವವನಾಗಿಯೂ ಒಳಗೆ ತರುವವ ನಾಗಿಯೂ ಇದ್ದಿ; ಕರ್ತನಾದ ನಿನ್ನ ದೇವರು ನಿನಗೆ ಹೇಳಿದ್ದು--ನೀನು ನನ್ನ ಜನರಾದ ಇಸ್ರಾಯೇಲ್ಯರನ್ನು ಮೇಯಿಸುವವನಾಗಿಯೂ; ಇಸ್ರಾಯೇಲ್ಯರ ಮೇಲೆ ಅಧಿಕಾರಿಯಾಗಿರುವಿ ಎಂಬದು. |
3. | ಹಾಗೆಯೇ ಇಸ್ರಾ ಯೇಲಿನ ಹಿರಿಯರೆಲ್ಲರು ಹೆಬ್ರೋನಿನಲ್ಲಿದ್ದ ಅರಸನ ಬಳಿಗೆ ಬಂದರು; ದಾವೀದನು ಹೆಬ್ರೋನಿನಲ್ಲಿ ಕರ್ತನ ಮುಂದೆ ಅವರ ಸಂಗಡ ಒಡಂಬಡಿಕೆ ಮಾಡಿದನು; ಕರ್ತನು ಸಮುವೇಲನ ಮುಖಾಂತರ ಹೇಳಿದ ವಾಕ್ಯದ ಪ್ರಕಾರ ಅವರು ದಾವೀದನನ್ನು ಇಸ್ರಾಯೇಲಿನ ಮೇಲೆ ಅರಸನಾಗಿರಲು ಅಭಿಷೇಕ ಮಾಡಿದರು. |
4. | ತರುವಾಯ ದಾವೀದನು ಸಮಸ್ತ ಇಸ್ರಾಯೇಲ್ಯರು ಯೆಬೂಸು ಎಂಬ ಹೆಸರುಳ್ಳ ಯೆರೂಸಲೇಮಿಗೆ ಹೋದರು. |
5. | ದೇಶ ನಿವಾಸಿಗಳಾದ ಯೆಬೂಸ್ಯರು ಅಲ್ಲಿ ಇದ್ದರು. ಆಗ ಯೆಬೂಸಿನ ನಿವಾಸಿಗಳು ದಾವೀದನಿಗೆ--ನೀನು ಇಲ್ಲಿ ಬರಬೇಡ ಅಂದರು. ಆದಾಗ್ಯೂ ದಾವೀದನ ಪಟ್ಟಣವಾದ ಚೀಯೋನೆಂಬ ಕೋಟೆಯನ್ನು ದಾವೀ ದನು ಹಿಡಿದನು. |
6. | ಯಾವನಾದರೂ ಮೊದಲು ಯೆಬೂಸಿಯರನ್ನು ಹೊಡೆದರೆ ಅವನೇ ಮುಖ್ಯಸ್ಥ ನಾಗಿಯೂ ಪ್ರಧಾನನಾಗಿಯೂ ಇರುವನೆಂದು ದಾವೀ ದನು ಹೇಳಿದ್ದನು. ಹಾಗೆಯೇ ಚೆರೂಯಳ ಮಗನಾದ ಯೋವಾಬನು ಮೊದಲು ಹೋಗಿ ಮುಖ್ಯಸ್ಥನಾದನು. |
7. | ದಾವೀದನು ಕೋಟೆಯೊಳಗೆ ವಾಸಮಾಡಿದನು; ಆದಕಾರಣ ಅದಕ್ಕೆ ದಾವೀದನ ಪಟ್ಟಣವೆಂದು ಹೆಸ ರಿಟ್ಟರು. |
8. | ಅವನು ಮಿಲ್ಲೋವು ಮೊದಲುಗೊಂಡು ಸುತ್ತಲೂ ಪಟ್ಟಣವನ್ನು ಕಟ್ಟಿಸಿದನು. ಆದರೆ ಪಟ್ಟಣ ದಲ್ಲಿ ಮಿಕ್ಕದ್ದನ್ನು ಯೋವಾಬನು ದುರಸ್ತು ಮಾಡಿಸಿ ದನು. |
9. | ಹೀಗೆಯೇ ಸೈನ್ಯಗಳ ಕರ್ತನು ಅವನ ಸಂಗಡ ಇದದ್ದರಿಂದ ದಾವೀದನು ಕ್ರಮೇಣವಾಗಿ ಅಭಿವೃದ್ಧಿಯಾದನು. |
10. | ದಾವೀದನಿಗೆ ಇರುವ ಮುಖ್ಯಸ್ಥರಾದ ಪರಾಕ್ರಮ ಶಾಲಿಗಳು ಇವರೇ; ಇಸ್ರಾಯೇಲನ್ನು ಕುರಿತು ಕರ್ತನು ಹೇಳಿದ ವಾಕ್ಯದ ಪ್ರಕಾರ ಅವನನ್ನು ಅರಸನನ್ನಾಗಿ ಮಾಡುವದಕ್ಕೆ ಅವರು ಸಮಸ್ತ ಇಸ್ರಾಯೇಲಿನ ಸಂಗಡ ಅವನ ರಾಜ್ಯದಲ್ಲಿ ತಮ್ಮನ್ನು ದೃಢಪಡಿಸಿಕೊಂಡರು. |
11. | ದಾವೀದನ ಸಂಗಡ ಇದ್ದ ಪರಾಕ್ರಮಶಾಲಿಗಳ ಲೆಕ್ಕವೇನಂದರೆ--ಹಕ್ಮೋನಿಯನಾದ ಯಾಷೊಬ್ಬಾ ಮನು ಅಧಿಪತಿಗಳಲ್ಲಿ ಮುಖ್ಯಸ್ಥನಾಗಿದ್ದನು; ಅವನು ಮುನ್ನೂರು ಮಂದಿಗೆ ವಿರೋಧವಾಗಿ ತನ್ನ ಈಟಿ ಯನ್ನು ಎತ್ತಿ ಒಂದೇ ಸಾರಿ ಅವರನ್ನು ಕೊಂದು ಹಾಕಿದನು. |
12. | ಅವನ ತರುವಾಯ ಅಹೋಹ್ಯನಾ ದಂಥ ದೋದೋನ ಮಗನಾದಂಥ ಎಲ್ಲಾಜಾರನು ಮೂರು ಮಂದಿ ಪರಾಕ್ರಮಾಶಾಲಿಗಳಲ್ಲಿ ಒಬ್ಬನಾ ಗಿದ್ದನು. |
13. | ಇವನು ದಾವೀದನ ಸಂಗಡ ಪಸ್ದವ್ಮೆಾಮಿನ ಬಳಿಯಲ್ಲಿದ್ದನು. ಅಲ್ಲಿ ಫಿಲಿಷ್ಟಿಯರು ಜವೆಗೋಧಿ ತುಂಬಿರುವ ಹೊಲದಲ್ಲಿ ಯುದ್ಧಕ್ಕೆ ಕೂಡಿಸಲ್ಪಟ್ಟಿರುವಾಗ ಜನರು ಫಿಲಿಷ್ಟಿಯರ ಮುಂದೆ ಓಡಿಹೋದರು. |
14. | ಆಗ ಇವರು ಆ ಹೊಲದ ಮಧ್ಯದಲ್ಲಿ ನಿಂತುಕೊಂಡು ಅದನ್ನು ತಪ್ಪಿಸಿ ಫಿಲಿಷ್ಟಿಯರನ್ನು ಕೊಂದುಹಾಕಿದರು; ಕರ್ತನು ಮಹಾ ಬಿಡುಗಡೆಯಿಂದ ರಕ್ಷಿಸಿದನು. |
15. | ಇದಲ್ಲದೆ ಮೂವತ್ತು ಮಂದಿ ಅಧಿಪತಿಗಳ ಲ್ಲಿರುವ ಮೂರು ಮಂದಿ ಅದುಲ್ಲಾಮ್ ಗವಿಯಲ್ಲಿರುವ ದಾವೀದನ ಬಳಿ ಗುಡ್ಡಕ್ಕೆ ಹೋದರು. ಅದೇ ವೇಳೆಯಲ್ಲಿ ಫಿಲಿಷ್ಟಿಯರ ಸೈನ್ಯವು ರೆಫಾಯಿಮ್ ತಗ್ಗಿನಲ್ಲಿ ಇಳಿದಿತ್ತು. |
16. | ಆಗ ದಾವೀದನು ಗಡಿಸ್ಥಳದಲ್ಲಿ ಇದ್ದನು; ಫಿಲಿಷ್ಟಿಯರ ದಂಡು ಬೇತ್ಲೆಹೇಮಿನಲ್ಲಿತ್ತು. |
17. | ಆಗ ದಾವೀದನು ಬೇತ್ಲೆಹೇಮಿನ ಬಾಗಲ ಬಳಿಯಲ್ಲಿರುವ ಬಾವಿಯ ನೀರನ್ನು ತನಗೆ ಕುಡಿಯಲು ಕೊಡುವವನಾರೆಂದು ಆಶೆಪಟ್ಟು ಹೇಳಿದನು. |
18. | ಆಗ ಆ ಮೂವರು ಫಿಲಿಷ್ಟಿಯರ ದಂಡಿನಲ್ಲಿ ನುಗ್ಗಿಹೋಗಿ ಬೇತ್ಲೆಹೇಮಿನ ಬಾಗಲ ಬಳಿಯಲ್ಲಿರುವ ಬಾವಿಯ ನೀರನ್ನು ಸೇದಿ ದಾವೀದನಿಗೆ ತೆಗೆದುಕೊಂಡು ಬಂದರು. |
19. | ಆದರೆ ದಾವೀದನು ಅದನ್ನು ಕುಡಿಯಲೊಲ್ಲದೆ ಕರ್ತನಿಗೆ ಹೊಯ್ದು--ನನ್ನ ದೇವರು ಇಂಥಾ ಕಾರ್ಯವನ್ನು ನನಗೆ ದೂರವಾಗ ಮಾಡಲಿ; ನಾನು ಈ ಮನುಷ್ಯರ ಪ್ರಾಣ ರಕ್ತವನ್ನು ಕುಡಿಯಬಹುದೇ? ತಮ್ಮ ಪ್ರಾಣ ಗಳಿಂದ ಅದನ್ನು ತಂದರಲ್ಲಾ ಎಂದು ಹೇಳಿ ಕುಡಿಯ ಲೊಲ್ಲದೆ ಇದ್ದನು. ಈ ಕಾರ್ಯಗಳನ್ನು ಮುಖ್ಯಸ್ಥರಾದ ಮೂರು ಮಂದಿ ಪರಾಕ್ರಮಶಾಲಿಗಳು ಮಾಡಿದರು. |
20. | ಇದಲ್ಲದೆ ಯೋವಾಬನ ಸಹೋದರನಾದ ಅಬ್ಷೈಯು ಮೂರು ಮಂದಿಯಲ್ಲಿ ಮುಖ್ಯಸ್ಥನಾಗಿದ್ದನು. ಅವನು ಮುನ್ನೂರು ಮಂದಿಗೆ ವಿರೋಧವಾಗಿ ತನ್ನ ಈಟಿಯನ್ನು ಎತ್ತಿ ಅವರನ್ನು ಕೊಂದುಹಾಕಿದ್ದರಿಂದ ಮೂವರಲ್ಲಿ ಹೆಸರುಗೊಂಡವನಾಗಿದ್ದನು. |
21. | ಈ ಮೂವರಲ್ಲಿ ಅವರಿಗೆ ಅವನು ಪ್ರಧಾನನಾಗಿದ್ದನು; ಆದರೆ ಮೂವರ ಕೂಡ ಸೇರದೆ ಇದ್ದನು. ಇಬ್ಬರಿಗಿಂತ ಅವನು ಘನವುಳ್ಳವನಾಗಿದ್ದನು; |
22. | ಕಬ್ಜಯೇಲಿನವ ನಾದ ಪರಾಕ್ರಮಶಾಲಿಯ ಮಗನಾದಂಥ ಯೆಹೋ ಯಾದನ ಮಗನಾದ ಬೆನಾಯನು ಅನೇಕ ಕ್ರಿಯೆಗ ಳನ್ನು ಮಾಡಿದನು; ಅವನು ಸಿಂಹದ ಹಾಗಿರುವ ಮೋವಾಬಿನ ಇಬ್ಬರು ಮನುಷ್ಯರನ್ನು ಕೊಂದನು. ಇನ್ನೊಮ್ಮೆ ಹಿಮದ ದಿವಸದಲ್ಲಿ ಇಳಿದು ಹೋಗಿ ಕುಣಿಯೊಳಗೆ ಒಂದು ಸಿಂಹವನ್ನು ಕೊಂದುಬಿಟ್ಟನು. |
23. | ಮತ್ತೊಮ್ಮೆ ಅವನು ಐದುಮೊಳ ಉದ್ದವಾದ ಐಗುಪ್ತ್ಯನನ್ನೂ ಕೊಂದುಬಿಟ್ಟನು; ಐಗುಪ್ತ್ಯನ ಕೈಯಲ್ಲಿ ನೇಯ್ಗೆಗಾರರ ಕುಂಟೆಯಂತಿರುವ ಒಂದು ಈಟಿ ಇತ್ತು; ಅವನು ಒಂದು ಕೋಲು ಹಿಡುಕೊಂಡು ಅವನ ಬಳಿಗೆ ಹೋಗಿ, ಐಗುಪ್ತ್ಯನ ಕೈಯಿಂದ ಈಟಿಯನ್ನು ಕಿತ್ತುಕೊಂಡು ಅವನ ಈಟಿಯಿಂದಲೇ ಅವನನ್ನು ಕೊಂದು ಹಾಕಿದನು. |
24. | ಯೆಹೋಯಾದನ ಮಗ ನಾದ ಬೆನಾಯನು ಇವುಗಳನ್ನು ಮಾಡಿ ಮೂರು ಮಂದಿ ಪರಾಕ್ರಮಶಾಲಿಗಳಲ್ಲಿ ಹೆಸರುಗೊಂಡವನಾ ದನು. |
25. | ಇಗೋ, ಅವನು ಮೂವತ್ತು ಮಂದಿಯಲ್ಲಿ ಘನವುಳ್ಳವನಾಗಿದ್ದನು; ಆದರೆ ಮೂವರ ಕೂಡ ಸೇರದೆ ಇದ್ದನು. ದಾವೀದನು ಅವನನ್ನು ತನ್ನ ಕಾವಲಿ ನವರ ಮೇಲೆ ಇಟ್ಟನು. |
26. | ಇದಲ್ಲದೆ ದಂಡುಗಳಲ್ಲಿರುವ ಪರಾಕ್ರಮಶಾಲಿ ಗಳು ಯಾರಂದರೆ--ಯೋವಾಬನ ಸಹೋದರನಾದ ಅಸಾಹೇಲನು, ಬೇತ್ಲೆಹೇಮಿನವನಾದ ದೋದೋ ವಿನ ಮಗನಾದ ಎಲ್ಖಾನಾನು, |
27. | ಹರೋರಿಯನಾದ ಶಮ್ಮೋತನು, |
28. | ಪೆಲೋನ್ಯನಾದ ಹೆಲೆಚನು, ತೆಕೋ ವಿಯನಾದ ಇಕ್ಕೇಷನ ಮಗನಾದ ಈರನು, ಅನ ತೋತಿನವನಾದ ಅಬೀಯೆಜೆರನು, |
29. | ಹುಷಾತ್ಯನಾದ ಸಿಬ್ಕೈನು, ಅಹೋಹಿತನಾದ ಈಲೈನು, ನೆಟೋಫದ ವನಾದ ಮಹರೈನು, |
30. | ನೆಟೋಫದವನಾದ ಬಾಣನ ಮಗನಾದ ಹೆಲೇದನು, |
31. | ಬೆನ್ಯಾವಿಾನನ ಮಕ್ಕಳಿಗೆ ಉಂಟಾದ ಗಿಬ್ಯದ ರೀಬೈನ ಮಗನಾದ ಈತೈಯು, ಪಿರತೋನ್ಯನಾದ ಬೆನಾಯನು, |
32. | ಗಾಷಿನ ಹಳ್ಳಗಳ ಬಳಿಯಲ್ಲಿರುವ ಹೂರೈನು, ಅರಾಬಾತಗ್ಗಿನವನಾದ ಅಬೀಯೇಲನು, |
33. | ಬಹರೂಮ್ಯನಾದ ಅಜ್ಮಾವೆತನು, ಶಾಲ್ಬೋನ್ಯನಾದ ಎಲೆಯಖ್ಬ, |
34. | ಗಿಜೋನ್ಯನಾದ ಹಾಷೇಮನ ಕುಮಾರರು, ಹರಾರಿಯನಾದ ಶಾಗೇಯ ಮಗನಾದ ಯೋನಾತಾನನು, |
35. | ಹರಾರಿಯನಾದ ಶಾಕಾರನ ಮಗನಾದ ಅಹೀಯಾಮನು, |
36. | ಊರನ ಮಗನಾದ ಎಲೀಫಲನು, ಮೆಕೆರಾತ್ಯನಾದ ಹೇಫೆ ರನು, ಫೆಲೋನ್ಯನಾದ ಅಹೀಯನು, |
37. | ಕರ್ಮೆಲ್ಯ ನಾದ ಹೆಚ್ರೋನು, ಎಜ್ಬೈಯನ ಮಗನಾದ ನಾರೈಯು, |
38. | ನಾತಾನನ ಸಹೋದರನಾದ ಯೋವೇಲನು ಹಗ್ರಿ ಯನ ಮಗನಾದ ಮಿಬ್ಹಾರನು, |
39. | ಅಮ್ಮೋನ್ಯನಾದ ಚೆಲೆಕನು, ಚೆರೂಯಳ ಮಗನಾದ ಯೋವಾಬನ ಆಯುಧಗಳನ್ನು ಹೊತ್ತುಕೊಂಡು ಹೋಗುವವನಾಗಿ ರುವ ಬೆರೋತ್ಯನಾದ ನಹರೈಯು, |
40. | ಇತ್ರೀಯನಾದ ಈರನು ಗಾರೇಬನು, |
41. | ಹಿತ್ತೀಯನಾದ ಊರೀಯನು, ಅಹ್ಲೈಯ ಮಗನಾದ ಜಾಬಾದನು, |
42. | ರೂಬೇನ್ಯ ನಾದ ಶೀಜನ ಮಗನಾದ ಅದೀನನು; ಇವನು ರೂಬೇನ್ಯರಲ್ಲಿ ಅಧಿಪತಿಯಾಗಿದ್ದನು; ಮೂವತ್ತು ಮಂದಿ ಅವನ ಸಂಗಡ ಇದ್ದರು. |
43. | ಮಾಕನ ಮಗ ನಾದ ಹಾನಾನನು, ಮೆತೆನನಾದ ಯೋಷಾಫಾಟನು, |
44. | ಅಷ್ಟೆರಾತ್ಯನಾದ ಉಜ್ಜೀಯನು ಅರೋಯೇರಿವ ನಾದ ಹೋತಾಮನ ಮಕ್ಕಳಾಗಿರುವ ಶಾಮಾ, ಯೆಗೀಯೇಲನೂ; |
45. | ಶಿಮ್ರಿಯ ಮಗನಾದ ಎದೀಗ ಯೇಲನು, ಅವನ ಸಹೋದರನಾದಂಥ ತೀಚೀಯ ನಾದಂಥ ಯೋಹನು. |
46. | ಮಹವೀಯನಾದ ಎಲೀ ಯೇಲನು, ಎಲ್ನಾಮನ ಮಕ್ಕಳಾದ ಯೇರಿಬೈಯನೂ ಯೋಷವ್ಯನೂ; |
47. | ಮೋವಾಬ್ಯನಾದ ಇತ್ಮನು, ಎಲೀ ಯೇಲನು, ಓಬೆದನು, ಮೆಚಬಾಯದವ ನಾದ ಯಾಸಿಯೇಲನು. |
← 1Chronicles (11/29) → |