Revelation (15/22)  

1. ಪರಲೋಕದಲ್ಲಿ ದೊಡ್ಡ ಅದ್ಭುತಕರವಾದ ಮತ್ತೊಂದು ಗುರುತನ್ನು ನಾನು ನೋಡಿ ದೆನು. ಏಳು ಮಂದಿ ದೂತರಲ್ಲಿ ಏಳು ಕಡೇ ಉಪದ್ರವ ಗಳಿದ್ದವು; ಯಾಕಂದರೆ ಅವುಗಳಲ್ಲಿ ದೇವರ ರೌದ್ರವು ತುಂಬಿದೆ.
2. ಬೆಂಕಿ ಬೆರೆತ ಒಂದು ಗಾಜಿನ ಸಮುದ್ರವೋ ಎಂಬಂತೆ ನನಗೆ ಕಾಣಿಸಿತು; ಆಗ ಮೃಗದ ಮೇಲೆಯೂ ಅದರ ವಿಗ್ರಹದ ಮೇಲೆಯೂ ಅದರ ಮುದ್ರೆಯ ಮೇಲೆಯೂ ಅದರ ಹೆಸರಿನ ಅಂಕೆಯ ಮೇಲೆಯೂ ಜಯ ಹೊಂದಿದವರು ದೇವರ ವೀಣೆಗಳನ್ನು ಹಿಡು ಕೊಂಡು ಗಾಜಿನ ಸಮುದ್ರದ ಮೇಲೆ ನಿಂತಿರುವದನು
3. ಅವರು ದೇವರ ಸೇವಕನಾದ ಮೋಶೆಯ ಹಾಡನ್ನೂ ಕುರಿಮರಿಯಾದಾತನ ಹಾಡನ್ನೂ ಹಾಡುತ್ತಾ--ಸರ್ವಶಕ್ತನಾಗಿರುವ ದೇವ ರಾದ ಕರ್ತನೇ, ನಿನ್ನ ಕ್ರಿಯೆಗಳು ಮಹತ್ತಾದವುಗಳೂ ಆಶ್ಚರ್ಯಕರವಾದವುಗಳೂ ಆಗಿವೆ; ಪರಿಶುದ್ಧರ ಅರಸನೇ, ನಿನ್ನ ಮಾರ್ಗಗಳು ನ್ಯಾಯವೂ ಸತ್ಯವೂ ಆಗಿವೆ.
4. ಓ ಕರ್ತನೇ, ನಿನಗೆ ಭಯಪಡದವರೂ ನಿನ್ನ ನಾಮವನ್ನು ಮಹಿಮೆಪಡಿಸದವರೂ ಯಾರಿ ದ್ದಾರೆ? ಯಾಕಂದರೆ ನೀನೊಬ್ಬನೇ ಪರಿಶುದ್ಧನು; ನಿನ್ನ ತೀರ್ಪುಗಳು ಪ್ರಕಟವಾದದ್ದರಿಂದ ಎಲ್ಲಾ ಜನಾಂಗ ಗಳು ಬಂದು ನಿನ್ನ ಸನ್ನಿಧಾನದಲ್ಲಿ ಆರಾಧಿಸುವರು ಎಂದು ಹೇಳಿದರು.
5. ಇದಾದ ಮೇಲೆ ನಾನು ನೋಡಿದಾಗ ಇಗೋ, ಪರಲೋಕದಲ್ಲಿರುವ ಸಾಕ್ಷೀ ಗುಡಾರದ ಆಲಯವು ತೆರೆಯಲ್ಪಟ್ಟಿತು.
6. ಇದಾದ ಮೇಲೆ ನಾನು ನೋಡಿದಾಗ ಇಗೋ, ಪರಲೋಕದಲ್ಲಿರುವ ಸಾಕ್ಷೀ ಗುಡಾರದ ಆಲಯವು ತೆರೆಯಲ್ಪಟ್ಟಿತು.
7. ದೇವರ ಮಹಿಮೆ ಯಿಂದಲೂ ಆತನ ಶಕ್ತಿಯಿಂದಲೂ ಉಂಟಾದ ಹೊಗೆ ಯಿಂದ ಆಲಯವು ತುಂಬಿದ ಕಾರಣ ಆ ಏಳುಮಂದಿ ದೂತರ ಏಳು ಉಪದ್ರವಗಳು ತೀರುವ ತನಕ ಆ ಆಲಯದೊಳಗೆ ಪ್ರವೇಶಿಸುವದಕ್ಕೆ ಯಾರಿಂದಲೂ ಆಗಲಿಲ್ಲ.
8. ದೇವರ ಮಹಿಮೆ ಯಿಂದಲೂ ಆತನ ಶಕ್ತಿಯಿಂದಲೂ ಉಂಟಾದ ಹೊಗೆ ಯಿಂದ ಆಲಯವು ತುಂಬಿದ ಕಾರಣ ಆ ಏಳುಮಂದಿ ದೂತರ ಏಳು ಉಪದ್ರವಗಳು ತೀರುವ ತನಕ ಆ ಆಲಯದೊಳಗೆ ಪ್ರವೇಶಿಸುವದಕ್ಕೆ ಯಾರಿಂದಲೂ ಆಗಲಿಲ್ಲ.

  Revelation (15/22)