← Numbers (7/36) → |
1. | ಮೋಶೆಯು ಗುಡಾರವನ್ನು ನಿಲ್ಲಿಸಿಅಭಿಷೇಕಿಸಿ ಪರಿಶುದ್ಧ ಮಾಡಿದ ದಿನದಲ್ಲಿ ವಸ್ತುಗಳನ್ನೂ ಬಲಿಪೀಠವನ್ನೂ ಅದರ ಎಲ್ಲಾ ವಸ್ತು ಗಳನ್ನೂ ಅಭಿಷೇಕಿಸಿ ಪರಿಶುದ್ಧಮಾಡಿದ ಮೇಲೆ ಆದದ್ದೇನಂದರೆ-- |
2. | ಇಸ್ರಾಯೇಲ್ಯರ ಪ್ರಧಾನರೂ ತಮ್ಮ ತಂದೆಗಳ ಮನೆಯ ಮುಖ್ಯಸ್ಥರೂ ಗೋತ್ರಗಳ ಮುಖ್ಯಾಧಿಕಾರಿಗಳೂ ಎಣಿಸಲ್ಪಟ್ಟವರ ಮೇಲೆ ಇದ್ದ ವರು ಅರ್ಪಿಸಿದರು. |
3. | ಅವರು ಕರ್ತನ ಎದುರಿನಲ್ಲಿ ತಂದ ಅರ್ಪಣೆ ಏನಂದರೆ--ಆರು ಕಮಾನು ಬಂಡಿ ಗಳೂ ಹನ್ನೆರಡು ಎತ್ತುಗಳೂ ಪ್ರಧಾನರಲ್ಲಿ ಇಬ್ಬರಿಗೆ ಒಂದು ಬಂಡಿಯನ್ನೂ, ಒಬ್ಬೊಬ್ಬನಿಗೆ ಒಂದೊಂದು ಎತ್ತನ್ನೂ ಅವರು ಗುಡಾರದ ಮುಂದೆ ತಂದರು. |
4. | ಕರ್ತನು ಮಾತನಾಡಿ ಮೋಶೆಗೆ ಹೇಳಿದ್ದೇನಂದರೆ |
5. | ಅವುಗಳನ್ನು ಅವರಿಂದ ತೆಗೆದುಕೋ, ಅವು ಸಭೆಯ ಗುಡಾರದ ಸೇವೆಮಾಡುವದಕ್ಕೋಸ್ಕರ ಇರಬೇಕು.ಅವುಗಳನ್ನು ಲೇವಿಯರಿಗೆ ಅವನವನ ಸೇವೆಯ ಪ್ರಕಾರ ಕೊಡಬೇಕು ಅಂದನು. |
6. | ಆಗ ಮೋಶೆಯು ಆ ಬಂಡಿಗಳನ್ನೂ ಎತ್ತುಗಳನ್ನೂ ತೆಗೆದುಕೊಂಡು ಅವು ಗಳನ್ನು ಲೇವಿಯರಿಗೆ ಕೊಟ್ಟನು. |
7. | ಎರಡು ಬಂಡಿ ಗಳನ್ನೂ ನಾಲ್ಕು ಎತ್ತುಗಳನ್ನೂ ಗೇರ್ಷೋನನ ಕುಮಾರರಿಗೆ ಅವರ ಸೇವೆಯ ಪ್ರಕಾರವಾಗಿ ಕೊಟ್ಟನು. |
8. | ಯಾಜಕನಾದ ಆರೋನನ ಮಗನಾದ ಈತಾಮಾರನ ಕೈಕೆಳಗಿರುವ ನಾಲ್ಕು ಬಂಡಿಗಳನ್ನೂ ಎಂಟು ಎತ್ತು ಗಳನ್ನೂ ಮೆರಾರೀಯ ಕುಮಾರರಿಗೆ ಅವರ ಸೇವೆಯ ಪ್ರಕಾರ ಕೊಟ್ಟನು. |
9. | ಆದರೆ ಕೆಹಾತ್ಯರ ಕುಮಾರರಿಗೆ ಯಾವದನ್ನೂ ಕೊಡಲಿಲ್ಲ. ಅವರು ತಮ್ಮ ಹೆಗಲುಗಳ ಮೇಲೆ ಹೊತ್ತುಕೊಂಡು ಹೋಗುವದೇ ಪರಿಶುದ್ಧ ಸ್ಥಳದಲ್ಲಿ ಅವರಿಗೆ ಸಂಬಂಧಪಟ್ಟ ಸೇವೆಯಾಗಿತ್ತು. |
10. | ಪ್ರಧಾನರು ಬಲೀಪೀಠದ ಪ್ರತಿಷ್ಠೆಗಾಗಿ ಅಭಿಷೇ ಕಿಸಿದ ದಿನದಲ್ಲಿ ಅದನ್ನು ಅರ್ಪಿಸಿದರು. ಪ್ರಧಾನರು ಬಲಿಪೀಠದ ಮುಂದೆ ತಮ್ಮ ಅರ್ಪಣೆಯನ್ನು ಅರ್ಪಿಸಿ ದರು. |
11. | ಕರ್ತನು ಮೋಶೆಗೆ ಹೇಳಿದ್ದೇನಂದರೆ--ಒಬ್ಬೊಬ್ಬ ಪ್ರಧಾನನು ತನ್ನ ತನ್ನ ದಿವಸದಲ್ಲಿ ಬಲಿ ಪೀಠದ ಪ್ರತಿಷ್ಠೆಗಾಗಿ ತನ್ನ ಅರ್ಪಣೆಯನ್ನು ಅರ್ಪಿಸಬೇಕು. |
12. | ಮೊದಲನೇ ದಿವಸದಲ್ಲಿ ತನ್ನ ಅರ್ಪಣೆಯನ್ನು ಅರ್ಪಿಸಿದವನು ಯೆಹೂದ ಗೋತ್ರದ ಅವ್ಮೆಾನಾ ದಾಬನ ಮಗನಾದ ನಹಶೋನನು. |
13. | ಅವನ ಅರ್ಪಣೆ ಏನಂದರೆ,--ನೂರಮೂವತ್ತು ಶೇಕೆಲಿನಷ್ಟು ತೂಕವಾದ ಬೆಳ್ಳಿಯ ಒಂದು ತಟ್ಟೆ, ಪರಿಶುದ್ಧ ಸ್ಥಳದ ಶೇಕೆಲ್ ಪ್ರಕಾರ ಎಪ್ಪತ್ತು ಶೇಕೆಲಿನಷ್ಟು ಬೆಳ್ಳಿಯ ಒಂದು ಬಟ್ಟಲು, ಆಹಾರದ ಸಮರ್ಪಣೆಗಾಗಿ ಈ ಎರಡು ಎಣ್ಣೇ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು. |
14. | ಧೂಪದಿಂದ ತುಂಬಿದ್ದ ಹತ್ತು ಶೇಕೆಲಿನಷ್ಟು ತೂಕದ ಬಂಗಾರದ ಒಂದು ಚಮಚ, |
15. | ದಹನಬಲಿಗಾಗಿ ಒಂದು ಎಳೇ ಹೋರಿ, ಒಂದು ಟಗರು, ಮೊದಲನೇ ವರುಷದ ಒಂದು ಕುರಿಮರಿ. |
16. | ಪಾಪದ ಬಲಿಗಾಗಿ ಆಡುಗಳಲ್ಲಿ ಒಂದು ಮರಿಯೂ |
17. | ಸಮಾಧಾನದ ಅರ್ಪಣೆಗಳ ಬಲಿಗಾಗಿ ಎರಡು ಎತ್ತುಗಳೂ ಐದು ಟಗರುಗಳೂ ಐದು ಹೋತಗಳೂ ಮೊದಲನೇ ವರುಷದ ಐದು ಕುರಿಮರಿಗಳೂ. ಇದು ಅವ್ಮೆಾನಾ ದಾಬನ ಮಗನಾದ ನಹಶೋನನ ಅರ್ಪಣೆಯು. |
18. | ಎರಡನೇ ದಿವಸದಲ್ಲಿ ಇಸ್ಸಾಕಾರನ ಪ್ರಧಾನ ನಾಗಿರುವ ಚೂವಾರನ ಮಗನಾದ ನೆತನೇಲನು ಅರ್ಪಿ ಸಿದನು. |
19. | ಅವನು ಅರ್ಪಿಸಿದ ಅರ್ಪಣೆ ಏನಂದರೆ, ನೂರ ಮೂವತ್ತು ಶೇಕೆಲಿನಷ್ಟು ತೂಕವಾದ ಬೆಳ್ಳಿಯ ಒಂದು ತಟ್ಟೆ, ಪರಿಶುದ್ಧ ಸ್ಥಳದ ಶೇಕೆಲಿನ ಪ್ರಕಾರ ಎಪ್ಪತ್ತು ಶೇಕೆಲಿನಷ್ಟು ಬೆಳ್ಳಿಯ ಒಂದು ಬಟ್ಟಲು, ಆಹಾರ ಸಮರ್ಪಣೆಗಾಗಿ ಈ ಎರಡು ಎಣ್ಣೇ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು. |
20. | ಧೂಪದಿಂದ ತುಂಬಿದ್ದ ಹತ್ತು ಶೇಕೆಲಿನಷ್ಟು ತೂಕದ ಬಂಗಾರದ ಒಂದು ಚಮಚ, |
21. | ದಹನಬಲಿಗಾಗಿ ಒಂದು ಎಳೇ ಹೋರಿ, ಒಂದು ಟಗರು, ಮೊದಲನೇ ವರುಷದ ಒಂದು ಕುರಿಮರಿ. |
22. | ಪಾಪದ ಬಲಿಗಾಗಿ ಆಡುಗಳಲ್ಲಿ ಒಂದು ಮರಿಯನ್ನೂ |
23. | ಸಮಾಧಾನದ ಅರ್ಪಣೆಗಳ ಬಲಿಗಾಗಿ ಎರಡು ಎತ್ತುಗಳೂ ಐದು ಟಗರುಗಳೂ ಐದು ಹೋತಗಳೂ ಮೊದಲನೇ ವರುಷದ ಐದು ಕುರಿಮರಿಗಳೂ. ಇದು ಚೂವಾರನ ಮಗನಾದ ನೆತನೇಲನ ಅರ್ಪಣೆಯು. |
24. | ಮೂರನೆ ದಿವಸದಲ್ಲಿ ಜೆಬುಲೂನನ ಮಕ್ಕಳಿಗೆ ಪ್ರಧಾನನಾಗಿರುವ ಹೇಲೋನನ ಮಗನಾದ ಎಲೀಯಾಬನು ಅರ್ಪಿಸಿದ್ದು. ಅವನ ಅರ್ಪಣೆ ಏನಂದರೆ-- |
25. | ನೂರ ಮೂವತ್ತು ಶೇಕೆಲಿನಷ್ಟು ತೂಕ ವಾದ ಬೆಳ್ಳಿಯ ಒಂದು ತಟ್ಟೆ, ಪರಿಶುದ್ಧ ಸ್ಥಳದ ಶೇಕೆಲ್ ಪ್ರಕಾರ ಎಪ್ಪತ್ತು ಶೇಕೆಲಿನಷ್ಟು ಬೆಳ್ಳಿಯ ಒಂದು ಬಟ್ಟಲು, ಆಹಾರ ಸಮರ್ಪಣೆಗಾಗಿ ಈ ಎರಡು ಎಣ್ಣೇ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು. |
26. | ಧೂಪದಿಂದ ತುಂಬಿದ್ದ ಹತ್ತು ಶೇಕೆಲಿನಷ್ಟು ತೂಕದ ಬಂಗಾರದ ಒಂದು ಚಮಚ, |
27. | ದಹನಬಲಿಗಾಗಿ ಒಂದು ಎಳೇ ಹೋರಿ, ಒಂದು ಟಗರು, ಮೊದಲನೇ ವರುಷದ ಒಂದು ಕುರಿಮರಿ. |
28. | ಪಾಪದ ಬಲಿಗಾಗಿ ಆಡುಗಳಲ್ಲಿ ಒಂದು ಮರಿಯೂ |
29. | ಸಮಾಧಾನದ ಅರ್ಪಣೆಯ ಬಲಿಗಾಗಿ ಎರಡು ಎತ್ತುಗಳೂ ಐದು ಟಗರುಗಳೂ ಐದು ಹೋತಗಳೂ ಮೊದಲನೇ ವರುಷದ ಐದು ಕುರಿಮರಿಗಳೂ. ಇದು ಹೇಲೋನನ ಮಗನಾದ ಎಲೀಯಾಬನ ಅರ್ಪಣೆಯು. |
30. | ನಾಲ್ಕನೇ ದಿನದಲ್ಲಿ ರೂಬೇನನ ಮಕ್ಕಳಿಗೆ ಪ್ರಧಾ ನನಾಗಿರುವ ಶೆದೇಯೂರನ ಮಗನಾದ ಎಲೀಚೂ ರನು ಅರ್ಪಿಸಿದನು. |
31. | ಅವನ ಅರ್ಪಣೆಯು ಏನಂದರೆ,--ನೂರಮೂವತ್ತು ಶೇಕೆಲಿನಷ್ಟು ತೂಕ ವಾದ ಬೆಳ್ಳಿಯ ತಟ್ಟೆ, ಪರಿಶುದ್ಧ ಸ್ಥಳದ ಶೇಕೆಲಿನ ಪ್ರಕಾರ ಎಪ್ಪತ್ತು ಶೇಕೆಲಿನಷ್ಟು ಬೆಳ್ಳಿಯ ಒಂದು ಬಟ್ಟಲು, ಆಹಾರ ಸಮರ್ಪಣೆಗಾಗಿ ಈ ಎರಡು ಎಣ್ಣೇ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು. |
32. | ಧೂಪದಿಂದ ತುಂಬಿದ್ದ ಹತ್ತು ಶೇಕೆಲಿನಷ್ಟು ತೂಕದ ಬಂಗಾರದ ಒಂದು ಚಮಚ. |
33. | ದಹನ ಬಲಿಗಾಗಿ ಒಂದು ಎಳೇ ಹೋರಿ, ಒಂದು ಟಗರು, ಮೊದಲನೇ ವರುಷದ ಒಂದು ಕುರಿಮರಿ. |
34. | ಪಾಪದ ಬಲಿಗಾಗಿ ಆಡುಗಳಲ್ಲಿ ಒಂದು ಮರಿಯೂ |
35. | ಸಮಾಧಾನದ ಅರ್ಪಣೆಯ ಬಲಿಗಾಗಿ ಎರಡು ಎತ್ತುಗಳೂ ಐದು ಟಗರುಗಳೂ ಐದು ಹೋತಗಳೂ ಮೊದಲನೇ ವರು ಷದ ಐದು ಕುರಿಮರಿಗಳೂ. ಇದು ಶೆದೇಯೂರನ ಮಗನಾದ ಎಲೀಚೂರನ ಅರ್ಪಣೆಯು. |
36. | ಐದನೇ ದಿನದಲ್ಲಿ ಸಿಮೆಯೋನ ಮಕ್ಕಳಿಗೆ ಪ್ರಧಾನನಾಗಿರುವ ಚೂರೀಷದ್ದೈಯನ ಮಗನಾದ ಶೆಲುವಿಾಯೇಲನು ಅರ್ಪಿಸಿದನು. |
37. | ಅವನ ಅರ್ಪ ಣೆಯು ಏನಂದರೆ--ನೂರ ಮೂವತ್ತು ಶೇಕೆಲಿನಷ್ಟು ತೂಕವಾದ ಬೆಳ್ಳಿಯ ತಟ್ಟೆ, ಪರಿಶುದ್ಧ ಸ್ಥಳದ ಶೇಕೆಲಿನ ಪ್ರಕಾರ ಎಪ್ಪತ್ತು ಶೇಕೆಲಿನಷ್ಟು ಬೆಳ್ಳಿಯ ಒಂದು ಬಟ್ಟಲು, ಆಹಾರ ಸಮರ್ಪಣೆಗಾಗಿ ಈ ಎರಡು ಎಣ್ಣೇ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು. |
38. | ಧೂಪದಿಂದ ತುಂಬಿದ್ದ ಹತ್ತು ಶೇಕೆಲಿನಷ್ಟು ತೂಕದ ಬಂಗಾರದ ಒಂದು ಚಮಚ, |
39. | ದಹನಬಲಿಗಾಗಿ ಒಂದು ಎಳೇ ಹೋರಿ, ಒಂದು ಟಗರು, ಮೊದಲನೇ ವರುಷದ ಒಂದು ಕುರಿಮರಿ. |
40. | ಪಾಪದ ಬಲಿಗಾಗಿ ಆಡುಗಳಲ್ಲಿ ಒಂದು ಮರಿಯೂ |
41. | ಸಮಾಧಾನದ ಅರ್ಪಣೆಯ ಬಲಿಗಾಗಿ ಎರಡು ಎತ್ತುಗಳೂ ಐದು ಟಗರುಗಳೂ ಐದು ಹೋತಗಳೂ ಮೊದಲನೇ ವರುಷದ ಐದು ಕುರಿಮರಿಗಳೂ. ಇದು ಚೂರಿಷದ್ದೈ ಯನ ಮಗನಾದ ಶೆಲುವಿಾಯೇಲನ ಅರ್ಪಣೆಯು. |
42. | ಆರನೇ ದಿನದಲ್ಲಿ ಗಾದನ ಮಕ್ಕಳಿಗೆ ಪ್ರಧಾನ ನಾಗಿರುವ ದೆಗೂವೇಲನ ಮಗನಾದ ಎಲ್ಯಾಸಾಫನು ಅರ್ಪಿಸಿದನು. |
43. | ಅವನ ಅರ್ಪಣೆಯು ಏನಂದರೆನೂರ ಮೂವತ್ತು ಶೇಕೆಲಿನಷ್ಟು ತೂಕವಾದ ಬೆಳ್ಳಿಯ ತಟ್ಟೆ, ಪರಿಶುದ್ಧ ಸ್ಥಳದ ಶೇಕೆಲಿನ ಪ್ರಕಾರ ಎಪ್ಪತ್ತು ಶೇಕೆಲಿನಷ್ಟು ಬೆಳ್ಳಿಯ ಒಂದು ಬಟ್ಟಲು, ಆಹಾರ ಸಮರ್ಪಣೆಗಾಗಿ ಈ ಎರಡು ಎಣ್ಣೇ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು. |
44. | ಧೂಪದಿಂದ ತುಂಬಿದ್ದ ಹತ್ತು ಶೇಕೆಲಿನಷ್ಟು ತೂಕದ ಬಂಗಾರದ ಒಂದು ಚಮಚ, |
45. | ದಹನ ಬಲಿಗಾಗಿ ಒಂದು ಎಳೇ ಹೋರಿ, ಒಂದು ಟಗರು, ಮೊದಲನೇ ವರುಷದ ಒಂದು ಕುರಿಮರಿ. |
46. | ಪಾಪದ ಬಲಿಗಾಗಿ ಆಡುಗಳಲ್ಲಿ ಒಂದು ಮರಿಯೂ |
47. | ಸಮಾಧಾನದ ಅರ್ಪಣೆಯ ಬಲಿಗಾಗಿ ಎರಡು ಎತ್ತುಗಳೂ ಐದು ಟಗರುಗಳೂ ಐದು ಹೋತಗಳೂ ಮೊದಲನೇ ವರುಷದ ಐದು ಕುರಿಮರಿಗಳೂ. ಇದು ದೆಗೂವೇಲನ ಮಗನಾದ ಎಲ್ಯಾಸಾಫನ ಅರ್ಪಣೆಯು. |
48. | ಏಳನೇ ದಿನದಲ್ಲಿ ಎಫ್ರಾಯಾಮ್ ಮಕ್ಕಳಿಗೆ ಪ್ರಧಾನನಾದ ಅವ್ಮೆಾಹೂದನ ಮಗನಾದ ಎಲೀಷಾಮನು ಅರ್ಪಿಸಿದನು. |
49. | ಅವನ ಅರ್ಪಣೆ ಏನಂದರೆ--ನೂರ ಮೂವತ್ತು ಶೇಕೆಲಿನಷ್ಟು ತೂಕ ವಾದ ಬೆಳ್ಳಿಯ ತಟ್ಟೆ, ಪರಿಶುದ್ಧ ಸ್ಥಳದ ಶೇಕೆಲ್ ಪ್ರಕಾರ ಎಪ್ಪತ್ತು ಶೇಕೆಲಿನಷ್ಟು ಬೆಳ್ಳಿಯ ಒಂದು ಬಟ್ಟಲು, ಆಹಾರ ಸಮರ್ಪಣೆಗಾಗಿ ಈ ಎರಡು ಎಣ್ಣೇ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು. |
50. | ಧೂಪದಿಂದ ತುಂಬಿದ್ದ ಹತ್ತು ಶೇಕೆಲಿನಷ್ಟು ತೂಕದ ಬಂಗಾರದ ಒಂದು ಚಮಚ. |
51. | ದಹನ ಬಲಿಗಾಗಿ ಒಂದು ಎಳೇ ಹೋರಿ, ಒಂದು ಟಗರು, ಮೊದಲನೇ ವರುಷದ ಒಂದು ಕುರಿಮರಿ. |
52. | ಪಾಪದ ಬಲಿಗಾಗಿ ಆಡುಗಳಲ್ಲಿ ಒಂದು ಮರಿಯೂ |
53. | ಸಮಾಧಾನದ ಅರ್ಪಣೆಯ ಬಲಿಗಾಗಿ ಎರಡು ಎತ್ತುಗಳೂ ಐದು ಟಗರುಗಳೂ ಐದು ಹೋತಗಳೂ ಮೊದಲನೇ ವರುಷದ ಐದು ಕುರಿಮರಿಗಳೂ. ಇದು ಅವ್ಮೆಾಹೂದನ ಮಗನಾದ ಎಲೀಷಾಮನ ಅರ್ಪಣೆಯು. |
54. | ಎಂಟನೇ ದಿನದಲ್ಲಿ ಮನಸ್ಸೆ ಮಕ್ಕಳಿಗೆ ಪ್ರಧಾನನಾದ ಪೆದಾಚೂರನ ಮಗನಾದ ಗವ್ಲೆಾ ಯೇಲ್ ಅರ್ಪಿಸಿದನು. |
55. | ಅವನ ಅರ್ಪಣೆಯು ಏನಂದರೆ,--ನೂರ ಮೂವತ್ತು ಶೇಕೆಲಿನಷ್ಟು ತೂಕದ ಬೆಳ್ಳಿಯ ಒಂದು ತಟ್ಟೆ, ಪರಿಶುದ್ಧ ಸ್ಥಳದ ಶೇಕೆಲಿನ ಪ್ರಕಾರ ಎಪ್ಪತ್ತು ಶೇಕೆಲಿನಷ್ಟು ಬೆಳ್ಳಿಯ ಒಂದು ಬಟ್ಟಲು, ಆಹಾರ ಸಮರ್ಪಣೆಗಾಗಿ ಈ ಎರಡು ಎಣ್ಣೇ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು. |
56. | ಧೂಪದಿಂದ ತುಂಬಿದ್ದ ಹತ್ತು ಶೇಕೆಲಿನಷ್ಟು ತೂಕದ ಬಂಗಾರದ ಒಂದು ಚಮಚ, |
57. | ದಹನಬಲಿಗಾಗಿ ಒಂದು ಎಳೇ ಹೋರಿ, ಒಂದು ಟಗರು, ಮೊದಲನೇ ವರುಷದ ಒಂದು ಕುರಿಮರಿ. |
58. | ಪಾಪದ ಬಲಿಗಾಗಿ ಆಡುಗಳಲ್ಲಿ ಒಂದು ಮರಿಯೂ |
59. | ಸಮಾಧಾನದ ಅರ್ಪಣೆಯ ಬಲಿಗಾಗಿ ಎರಡು ಎತ್ತುಗಳೂ ಐದು ಟಗರುಗಳೂ ಐದು ಹೋತಗಳೂ ಮೊದಲನೇ ವರುಷದ ಐದು ಕುರಿಮರಿಗಳೂ. ಇದು ಪೆದಾಚೂರನ ಮಗನಾದ ಗವ್ಲೆಾಯೇಲನ ಅರ್ಪಣೆಯು. |
60. | ಒಂಭತ್ತನೇ ದಿನದಲ್ಲಿ ಬೆನ್ಯಾವಿಾನನ ಮಕ್ಕಳಿಗೆ ಪ್ರಧಾನನಾದ ಗಿದ್ಯೋನಿಯ ಮಗನಾದ ಅಬೀದಾ ನನು ಅರ್ಪಿಸಿದನು. |
61. | ಅವನ ಅರ್ಪಣೆಯು ಏನಂದರೆ--ನೂರ ಮೂವತ್ತು ಶೇಕೆಲಿನಷ್ಟು ತೂಕದ ಬೆಳ್ಳಿಯ ತಟ್ಟೆ, ಪರಿಶುದ್ಧ ಸ್ಥಳದ ಶೇಕೆಲಿನ ಪ್ರಕಾರ ಎಪ್ಪತ್ತು ಶೇಕೆಲಿನಷ್ಟು ಬೆಳ್ಳಿಯ ಒಂದು ಬಟ್ಟಲು, ಆಹಾರ ಸಮರ್ಪಣೆಗಾಗಿ ಈ ಎರಡು ಎಣ್ಣೇ ಬೆರೆಸಿದ ನಯ ವಾದ ಹಿಟ್ಟಿನಿಂದ ತುಂಬಿದ್ದವು. |
62. | ಧೂಪದಿಂದ ತುಂಬಿದ್ದ ಹತ್ತು ಶೇಕೆಲಿನಷ್ಟು ತೂಕದ ಬಂಗಾರದ ಒಂದು ಚಮಚ, |
63. | ದಹನಬಲಿಗಾಗಿ ಒಂದು ಎಳೇ ಹೋರಿ, ಒಂದು ಟಗರು, ಮೊದಲನೇ ವರುಷದ ಒಂದು ಕುರಿಮರಿ. |
64. | ಪಾಪದ ಬಲಿಗಾಗಿ ಆಡುಗಳಲ್ಲಿ ಒಂದು ಮರಿಯೂ |
65. | ಸಮಾಧಾನದ ಅರ್ಪಣೆಯ ಬಲಿಗಾಗಿ ಎರಡು ಎತ್ತುಗಳೂ ಐದು ಟಗರುಗಳೂ ಐದು ಹೋತಗಳೂ ಮೊದಲನೇ ವರುಷದ ಐದು ಕುರಿಮರಿಗಳೂ. ಇದು ಗಿದ್ಯೋನಿಯ ಮಗನಾದ ಅಬೀದಾನನ ಅರ್ಪಣೆಯು. |
66. | ಹತ್ತನೆಯ ದಿನದಲ್ಲಿ ದಾನನ ಮಕ್ಕಳಿಗೆ ಪ್ರಧಾನ ನಾದ ಅವ್ಮೆಾಷದ್ದೈಯನ ಮಗನಾದ ಅಹೀಗೆಜೆರನು ಅರ್ಪಿಸಿದನು. |
67. | ಅವನ ಅರ್ಪಣೆಯು ಏನಂದರೆನೂರ ಮೂವತ್ತು ಶೇಕೆಲಿನಷ್ಟು ತೂಕದ ಬೆಳ್ಳಿಯ ತಟ್ಟೆ, ಪರಿಶುದ್ಧ ಸ್ಥಳದ ಶೇಕೆಲಿನ ಪ್ರಕಾರ ಎಪ್ಪತ್ತು ಶೇಕೆಲಿನಷ್ಟು ಬೆಳ್ಳಿಯ ಒಂದು ಬಟ್ಟಲು, ಆಹಾರ ಸಮರ್ಪಣೆಗಾಗಿ ಈ ಎರಡು ಎಣ್ಣೇ ಬೆರೆಸಿದ ನಯ ವಾದ ಹಿಟ್ಟಿನಿಂದ ತುಂಬಿದ್ದವು. |
68. | ಧೂಪದಿಂದ ತುಂಬಿದ್ದ ಹತ್ತು ಶೇಕೆಲಿನಷ್ಟು ತೂಕದ ಬಂಗಾರದ ಒಂದು ಚಮಚ, |
69. | ದಹನಬಲಿಗಾಗಿ ಒಂದು ಎಳೇ ಹೋರಿ, ಒಂದು ಟಗರು, ಮೊದಲನೇ ವರುಷದ ಒಂದು ಕುರಿಮರಿ. |
70. | ಪಾಪದ ಬಲಿಗಾಗಿ ಆಡುಗಳಲ್ಲಿ ಒಂದು ಮರಿಯೂ |
71. | ಸಮಾಧಾನದ ಅರ್ಪಣೆಯ ಬಲಿಗಾಗಿ ಎರಡು ಎತ್ತುಗಳೂ ಐದು ಟಗರುಗಳೂ ಐದು ಹೋತಗಳೂ ಮೊದಲನೇ ವರುಷದ ಐದು ಕುರಿಮರಿಗಳೂ. ಇದು ಅವ್ಮೆಾಷದ್ದೈಯನ ಮಗನಾದ ಅಹೀಗೆಜೆರನ ಅರ್ಪಣೆಯು. |
72. | ಹನ್ನೊಂದನೆಯ ದಿನದಲ್ಲಿ ಆಶೇರನ ಮಕ್ಕಳಿಗೆ ಪ್ರಧಾನನಾದ ಒಕ್ರಾನನ ಮಗನಾದ ಪಗೀಯೇಲನು ಅರ್ಪಿಸಿದನು. |
73. | ಅವನ ಆರ್ಪಣೆಯು ಏನಂದರೆನೂರ ಮೂವತ್ತು ಶೇಕೆಲಿನಷ್ಟು ತೂಕವಾದ ಬೆಳ್ಳಿಯ ತಟ್ಟೆ, ಪರಿಶುದ್ಧ ಸ್ಥಳದ ಶೇಕೆಲಿನ ಪ್ರಕಾರ ಎಪ್ಪತ್ತು ಶೇಕೆಲಿನಷ್ಟು ಬೆಳ್ಳಿಯ ಒಂದು ಬಟ್ಟಲು, ಆಹಾರ ಸಮರ್ಪಣೆಗಾಗಿ ಈ ಎರಡು ಎಣ್ಣೇ ಬೆರೆಸಿದ ನಯ ವಾದ ಹಿಟ್ಟಿನಿಂದ ತುಂಬಿದ್ದವು. |
74. | ಧೂಪದಿಂದ ತುಂಬಿದ್ದ ಹತ್ತು ಶೇಕೆಲಿನಷ್ಟು ತೂಕದ ಬಂಗಾರದ ಒಂದು ಚಮಚ, |
75. | ದಹನಬಲಿಗಾಗಿ ಒಂದು ಎಳೇ ಹೋರಿ, ಒಂದು ಟಗರು, ಮೊದಲನೇ ವರುಷದ ಒಂದು ಕುರಿಮರಿ. |
76. | ಪಾಪದ ಬಲಿಗಾಗಿ ಆಡುಗಳಲ್ಲಿ ಒಂದು ಮರಿಯೂ |
77. | ಸಮಾಧಾನದ ಅರ್ಪಣೆಯ ಬಲಿಗಾಗಿ ಎರಡು ಎತ್ತುಗಳೂ ಐದು ಟಗರುಗಳೂ ಐದು ಹೋತಗಳೂ ಮೊದಲನೇ ವರುಷದ ಐದು ಕುರಿಮರಿಗಳೂ ಇದು ಒಕ್ರಾನನ ಮಗನಾದ ಪಗೀ ಯೇಲನ ಅರ್ಪಣೆಯು. |
78. | ಹನ್ನೆರಡನೆ ದಿನದಲ್ಲಿ ನಫ್ತಾಲಿ ಮಕ್ಕಳಿಗೆ ಪ್ರಧಾನ ನಾದ ಏನಾನನ ಮಗನಾದ ಅಹೀರನು ಅರ್ಪಿಸಿದನು. |
79. | ಅವನ ಅರ್ಪಣೆಯು ಏನಂದರೆ--ನೂರ ಮೂವತ್ತು ಶೇಕೆಲಿನಷ್ಟು ತೂಕವಾದ ಬೆಳ್ಳಿಯ ತಟ್ಟೆ, ಪರಿಶುದ್ಧ ಸ್ಥಳದ ಶೇಕೆಲಿನ ಪ್ರಕಾರ ಎಪ್ಪತ್ತು ಶೇಕೆಲಿನಷ್ಟು ಬೆಳ್ಳಿಯ ಒಂದು ಬಟ್ಟಲು, ಆಹಾರ ಸಮರ್ಪಣೆಗಾಗಿ ಈ ಎರಡು ಎಣ್ಣೇ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು. |
80. | ಧೂಪದಿಂದ ತುಂಬಿದ್ದ ಹತ್ತು ಶೇಕೆಲಿನಷ್ಟು ತೂಕದ ಬಂಗಾರದ ಒಂದು ಚಮಚ, |
81. | ದಹನಬಲಿಗಾಗಿ ಒಂದು ಎಳೇ ಹೋರಿ, ಒಂದು ಟಗರು, ಮೊದಲನೇ ವರುಷದ ಒಂದು ಕುರಿಮರಿ. |
82. | ಪಾಪದ ಬಲಿಗಾಗಿ ಆಡುಗಳಲ್ಲಿ ಒಂದು ಮರಿಯೂ |
83. | ಸಮಾಧಾನದ ಅರ್ಪಣೆಯ ಬಲಿಗಾಗಿ ಎರಡು ಎತ್ತುಗಳೂ ಐದು ಟಗರುಗಳೂ ಐದು ಹೋತಗಳೂ ಮೊದಲನೇ ವರುಷದ ಐದು ಕುರಿಮರಿಗಳೂ. ಇದು ಏನಾನನ ಮಗನಾದ ಅಹೀರನ ಅರ್ಪಣೆಯು. |
84. | ಇದು ಬಲಿಪೀಠದ ಪ್ರತಿಷ್ಠೆಯು: ಅದನ್ನು ಅಭಿಷೇಕ ಮಾಡಿದ ದಿನದಲ್ಲಿ ಇಸ್ರಾಯೇಲಿನ ಪ್ರಧಾನರು ಅರ್ಪಿಸಿದ್ದು ಬೆಳ್ಳಿಯ ಹನ್ನೆರಡು ತಟ್ಟೆಗಳೂ ಬೆಳ್ಳಿಯ ಹನ್ನೆರಡು ಬಟ್ಟಲುಗಳೂ ಬಂಗಾರದ ಹನ್ನೆರಡು ಚಮಚಗಳೂ. |
85. | ಬೆಳ್ಳಿಯ ಒಂದೊಂದು ತಟ್ಟೆಗಳ ತೂಕವು ನೂರ ಮೂವತ್ತು ಶೇಕೆಲು. ಒಂದೊಂದು ಬಟ್ಟಲಿಗೆ ಎಪ್ಪತ್ತು, ಬೆಳ್ಳಿಯ ಎಲ್ಲಾ ವಸ್ತುಗಳಿಗೆ ಪರಿಶುದ್ಧ ಸ್ಥಳದ ಶೇಕೆಲಿನ ಪ್ರಕಾರ ಎರಡು ಸಾವಿರದ ನಾಲ್ಕು ನೂರು. |
86. | ಧೂಪ ತುಂಬಿದ್ದ ಹನ್ನೆರಡು ಬಂಗಾರದ ಚಮಚಗಳು, ಪರಿಶುದ್ಧ ಸ್ಥಳದ ಶೇಕೆಲಿನ ಪ್ರಕಾರ ಒಂದೊಂದಕ್ಕೆ ಹತ್ತು, ಮತ್ತು ಚಮಚಗಳ ಬಂಗಾರವೆಲ್ಲಾ ನೂರ ಇಪ್ಪತ್ತು ಶೇಕೆಲ್; |
87. | ದಹನ ಬಲಿಗಾಗಿ ಇರುವ ಹೋರಿಗಳು ಹನ್ನೆರಡು, ಟಗರು ಗಳು ಹನ್ನೆರಡು, ಮೊದಲನೇ ವರುಷದ ಕುರಿಮರಿಗಳು ಹನ್ನೆರಡು, ಅವುಗಳೊಂದಿಗೆ ಆಹಾರ ಸಮರ್ಪಣೆ; ಮತ್ತು ಪಾಪದ ಬಲಿಗಾಗಿ ಆಡುಮರಿಗಳು ಹನ್ನೆ ರಡು, |
88. | ಸಮಾಧಾನದ ಅರ್ಪಣೆಯ ಬಲಿಗಾಗಿರುವ ಎತ್ತುಗಳೆಲ್ಲಾ ಇಪ್ಪತ್ತನಾಲ್ಕು, ಟಗರುಗಳು ಅರವತ್ತು, ಹೋತಗಳು ಅರವತ್ತು, ಮೊದಲನೇ ವರುಷದ ಕುರಿಮರಿಗಳು ಅರವತ್ತು. ಅದನ್ನು ಅಭಿಷೇಕಿಸಿದ ತರು ವಾಯ ಬಲಿಪೀಠಕ್ಕೆ ಮಾಡಿದ ಪ್ರತಿಷ್ಠೆಯು ಇದಾಗಿತ್ತು ಎಂಬದೇ. |
89. | ಇದಲ್ಲದೆ ಮೋಶೆಯು ದೇವರ ಸಂಗಡ ಮಾತನಾಡುವದಕ್ಕೆ ಸಭೆಯ ಗುಡಾರದೊಳಗೆ ಪ್ರವೇಶಿ ಸಿದಾಗ ಅವನು ಸಾಕ್ಷಿಯ ಮಂಜೂಷದ ಮೇಲೆ ಇರುವ ಕೃಪಾಸನದ ಮೇಲಿನಿಂದ ಎರಡು ಕೆರೂಬಿಗಳ ಮಧ್ಯದಿಂದ ತನ್ನ ಸಂಗಡ ಮಾತನಾಡುವವನ ಧ್ವನಿ ಯನ್ನು ಕೇಳಿದನು. ಹೀಗೆ ಆತನು ಅವನ ಸಂಗಡ ಮಾತನಾಡಿದನು. |
← Numbers (7/36) → |