Isaiah (4/66)  

1. ಆ ದಿವಸದಲ್ಲಿ ಏಳು ಮಂದಿ ಹೆಂಗಸರು ಒಬ್ಬ ಮನುಷ್ಯನನ್ನು ಹಿಡಿದು--ನಾವು ಸ್ವಂತವಾಗಿ ದುಡಿದು ಉಣ್ಣುವೆವು; ನಾವೇ ಸಂಪಾದಿಸಿ ವಸ್ತ್ರಗಳನ್ನು ಉಟ್ಟುಕೊಳ್ಳುವೆವು; ನಮ್ಮ ನಿಂದೆಯನ್ನು ನೀಗಿಸುವದಕ್ಕೆ ನಿನ್ನ ಹೆಸರು ನಮಗಿದ್ದರೆ ಸಾಕು ಎಂದು ಕೇಳಿಕೊಳ್ಳುವರು ಎಂಬದೇ.
2. ಆ ದಿನದಲ್ಲಿ ಕರ್ತನ ಕೊಂಬೆಯು ಸುಂದರವಾ ಗಿಯೂ ಮಹಿಮೆಯುಳ್ಳದ್ದಾಗಿಯೂ ಇರುವದು. ಭೂಮಿಯ ಫಲವು ಇಸ್ರಾಯೇಲ್ಯರಲ್ಲಿ ಉಳಿದವರಿಗೆ ಉತ್ತಮವಾಗಿಯೂ ರಮ್ಯವಾಗಿಯೂ ಇರುವದು.
3. ಹೀಗಿರುವಲ್ಲಿ ಚೀಯೋನಿನಲ್ಲಿ ಬಿಡಲ್ಪಟ್ಟವರು, ಯೆರೂಸಲೇಮಿನಲ್ಲಿ ಉಳಿದವರು, ಹಾಗೂ ಯೆರೂ ಸಲೇಮಿನಲ್ಲಿ ವಾಸಿಸುವವರೊಳಗೆ ಬರೆದಿರುವ ಪ್ರತಿ ಯೊಬ್ಬ ಮನುಷ್ಯನು ಪರಿಶುದ್ಧನೆಂದು ಕರೆಯಲ್ಪಡು ವನು.
4. ಕರ್ತನು ನ್ಯಾಯತೀರ್ಪಿನ ಆತ್ಮದಿಂದಲೂ ದಹಿಸುವ ಆತ್ಮದಿಂದಲೂ ಚೀಯೋನಿನ ಕುಮಾರ್ತೆ ಯರ ಕಲ್ಮಷವನ್ನು ತೊಳೆದು ಯೆರೂಸಲೇಮಿನ ಮಧ್ಯ ದಲ್ಲಿರುವ ರಕ್ತವನ್ನು ಶುದ್ಧೀಕರಿಸುವನು.
5. ಕರ್ತನು ಚೀಯೋನ್‌ ಪರ್ವತದ ಪ್ರತಿಯೊಂದು ವಾಸಿಸುವ ಸ್ಥಳದ ಮೇಲೂ ಅವಳ ಸಭೆಗಳ ಮೇಲೂ ಹಗಲಿನಲ್ಲಿ ಹೊಗೆಯನ್ನೂ ಮೇಘವನ್ನೂ ಇರುಳಿನಲ್ಲಿ ಪ್ರಜ್ವಲಿ ಸುವ ಅಗ್ನಿಪ್ರಕಾಶವನ್ನೂ ಉಂಟುಮಾಡುವನು; ಎಲ್ಲಾ ಮಹಿಮೆಯ ಮೇಲೆ ಕಾವಲಿರುವದು.
6. ಹಗಲಲ್ಲಿ ಬಿಸಿಲಿಗೆ ನೆರಳಾಗುವ ಹಾಗೂ ಬಿರುಗಾಳಿಗೂ ಮಳೆಗೂ ಮರೆಯಾಗಲು ಆಶ್ರಯ ಸ್ಥಾನವಾಗಿ ಒಂದು ಗುಡಾರವಿರುವದು.

  Isaiah (4/66)